ಐಪಿಎಲ್ 2019: ನಾಯಕತ್ವದಿಂದ ರಹಾನೆ ಕಿಕ್ ಔಟ್​, ಸ್ಟೀವ್ ಸ್ಮಿತ್ ರಾಜಸ್ಥಾನ ರಾಯಲ್ಸ್ ಹೊಸ ಸಾರಥಿ..!

ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ತಂಡದ ಟೀಮ್ ಮ್ಯಾನೇಜ್ ಮೆಂಟ್ ಮಹತ್ತರ ಬದಲಾವಣೆ ಮಾಡಿದ್ದು, ನಾಯಕನ ಸ್ಥಾನದಿಂದ ಅಜಿಂಕ್ಯಾ ರಹಾನೆ ಅವರನ್ನು ಕಿಕ್ ಔಟ್ ಮಾಡಲಾಗಿದೆ.

Published: 21st April 2019 12:00 PM  |   Last Updated: 21st April 2019 12:54 PM   |  A+A-


IPL 2019: Steve Smith takes over Rajasthan Royals captaincy from Ajinkya Rahane

ಸಂಗ್ರಹ ಚಿತ್ರ

Posted By : SVN SVN
Source : Online Desk
ಜೈಪುರ: ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ತಂಡದ ಟೀಮ್ ಮ್ಯಾನೇಜ್ ಮೆಂಟ್ ಮಹತ್ತರ ಬದಲಾವಣೆ ಮಾಡಿದ್ದು, ನಾಯಕನ ಸ್ಥಾನದಿಂದ ಅಜಿಂಕ್ಯಾ ರಹಾನೆ ಅವರನ್ನು ಕಿಕ್ ಔಟ್ ಮಾಡಲಾಗಿದೆ.

ಅಂತೆಯೇ ಐಪಿಎಲ್ ನ ರಾಜಸ್ಥಾನ ರಾಯಲ್ಸ್ ತಂಡದ ನೂತನ ನಾಯಕನಾಗಿ, ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಆಯ್ಕೆಯಾಗಿದ್ದಾರೆ. ನಾಯಕತ್ವದಿಂದ ಅಜಿಂಕ್ಯಾ ರಹಾನೆಗೆ ಆರ್ ​ಆರ್ ಮ್ಯಾನೇಜ್​ಮೆಂಟ್ ಕೊಕ್ ನೀಡಿದೆ. ಟೂರ್ನಿಯಲ್ಲಿ ರಾಯಲ್ಸ್ ಆಡಲಿರುವ ಉಳಿದ ಪಂದ್ಯಗಳಲ್ಲಿ ತಂಡವನ್ನ ಸ್ಮಿತ್ ಮುನ್ನಡೆಸಲಿದ್ದಾರೆ.

ಈ ಬಾರಿಯ ಐಪಿಎಲ್​ನಲ್ಲಿ ರಹಾನೆ ನಾಯಕತ್ವದಲ್ಲಿ ಆರ್​ಆರ್​ ಕಳಪೆ ಪ್ರದರ್ಶನ ನೀಡಿದ್ದು, 8 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಜಯಗಳಿಸಿದೆ. ಪಾಯಿಂಟ್​ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಕಠಿಣ ಸಂದರ್ಭದಲ್ಲು ರಹಾನೆ  ತಂಡವನ್ನ ಉತ್ತಮವಾಗಿ ಮುನ್ನಡೆಸಿದ್ದಾರೆ. ಆದರೆ ನಾಯಕನಾಗಿ ಸ್ಮಿತ್ ಉತ್ತಮ ದಾಖಲೆ ಹೊಂದಿದ್ದಾರೆ. ಹೀಗಾಗಿ ಅವ​ರನ್ನು ಹೊಸ ನಾಯಕರಾಗಿ ನೇಮಕ ಮಾಡಲಾಗಿದೆ ಎಂದು ಆರ್ ​ಆರ್ ತಂಡದ ಮೂಲಗಳು ತಿಳಿಸಿವೆ. ಸದ್ಯ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಿಂದಲೇ ಸ್ಮಿತ್​ ಆರ್ ​ಆರ್ ಸಾರಥ್ಯ ವಹಿಸಿ ಹಾಲಿ ಟೂರ್ನಿಯ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದ್ದು, ತಂಡದ ನಿರ್ಧಾರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನಲಾಗುತ್ತಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp