ಧೋನಿ ಬ್ಯಾಟಿಂಗ್ ನಮಗೆಲ್ಲಾ ಭಯ ಹುಟ್ಟಿಸಿತ್ತು: ವಿರಾಟ್ ಕೊಹ್ಲಿ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಒಂದು ರನ್‍ನಿಂದ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಧೋನಿ ಬ್ಯಾಟಿಂಗ್ ನಮಗೆಲ್ಲಾ ಭಯ ಹುಟ್ಟಿಸಿತ್ತು ಎಂದು

Published: 22nd April 2019 12:00 PM  |   Last Updated: 22nd April 2019 04:56 AM   |  A+A-


Dhoni's batting give us a massive scare, says Virat Kohli

ಧೋನಿ ಬ್ಯಾಟಿಂಗ್ ನಮಗೆಲ್ಲಾ ಭಯ ಹುಟ್ಟಿಸಿತ್ತು: ವಿರಾಟ್ ಕೊಹ್ಲಿ

Posted By : SBV SBV
Source : UNI
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ರೋಚಕ ಪಂದ್ಯದಲ್ಲಿ ಒಂದು ರನ್‍ನಿಂದ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ಧೋನಿ ಬ್ಯಾಟಿಂಗ್ ನಮಗೆಲ್ಲಾ ಭಯ ಹುಟ್ಟಿಸಿತ್ತು ಎಂದು ತಿಳಿಸಿದ್ದಾರೆ.

'ನಾವು 19ನೇ ಓವರ್ ವರೆಗೂ ಉತ್ತಮ ಬೌಲಿಂಗ್ ನಡೆಸಿದ್ದೇವೆ. ಈ ಪಿಚ್ ನಲ್ಲಿ 160 ರನ್ ಸಮರ್ಥಿಸಿಕೊಳ್ಳುವುದು ಉತ್ತಮ ಕೆಲಸ. ಈ ಪಂದ್ಯ ಗೆದ್ದಿರುವುದು ಖುಷಿ ನೀಡಿದೆ. ಇದಕ್ಕೂ ಮೊದಲು ಎರಡು ಪಂದ್ಯಗಳನ್ನು ನಾವು ಕಡಿಮೆ ರನ್ ಗಳಿಂದ ಸೋತಿದ್ದೇವೆ' ಎಂದು ತಿಳಿಸಿದ್ದಾರೆ.

'ಧೋನಿ ಅವರು ತಮ್ಮ ಭರ್ಜರಿ ಬ್ಯಾಟಿಂಗ್ ನಿಂದ, ನನಗೆ ಹಾಗೂ ನನ್ನ ತಂಡವನ್ನು ಸೋಲಿಸಿದರು. ಮಾಹಿ ಅವರು ಯಾವುದಕ್ಕೆ ಖ್ಯಾತರೋ, ಅಂತಹ ಆಟ ಆಡಿದ್ದಾರೆ. ಅವರು ತಮ್ಮ ಧಮಾಕೆದಾರ್ ಪ್ರದರ್ಶನದಿಂದ ನಮ್ಮಗೆಲ್ಲ ಭಯ ಹುಟ್ಟಿಸಿದ್ದರು' ಎಂದು ಧೋನಿ ಬ್ಯಾಟಿಂಗ್ ನ್ನು ವಿರಾಟ್ ಹಾಡಿ ಹೊಗಳಿದ್ದಾರೆ.

ಮೊದಲ ಆರು ಓವರ್ ಗಳಲ್ಲಿ ಚೆಂಡು ಬ್ಯಾಟ್ ಗೆ ಉತ್ತಮವಾಗಿ ಬರುತ್ತಿರಲಿಲ್ಲ. ಎಬಿಡಿ ಹಾಗೂ ಪಾರ್ಥಿವ್ ಅವರು ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು. ನಾವು 175 ರನ್ ಗಳ ಗುರಿ ಲೆಕ್ಕಾ ಹಾಕಿದ್ದೇವು. ಆದರೆ 15 ರನ್ ಗಳು ಕಡಿಮೆ ಆಯಿತು. ಬೌಲರ್ ಗಳು ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ ಎಂದು ವಿರಾಟ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp