ಕೊನೆಯ ಓವರ್‌ನಲ್ಲಿ ರೋಚಕ 1 ರನ್ ಗೆಲುವು ಸಾಧಿಸಿದ ಆರ್‌ಸಿಬಿ, ಚೆನ್ನೈಗೆ ಗೆಲುವಿನ ತಿರುಗೇಟು!

ಚೆನ್ನೈ ವಿರುದ್ಧ ಮೊದಲ ಪಂದ್ಯ ಸೋಲಿನಿಂದ ಎದೆಗುಂದಿದ್ದ ವಿರಾಟ್ ಕೊಹ್ಲಿ ಪಡೆ ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆಯ ಓವರ್‌ನಲ್ಲಿ 26 ರನ್ ಬೇಕಿದ್ದ ಚೆನ್ನೈ ತಂಡವನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಚೆನ್ನೈ ವಿರುದ್ಧ ಮೊದಲ ಪಂದ್ಯ ಸೋಲಿನಿಂದ ಎದೆಗುಂದಿದ್ದ ವಿರಾಟ್ ಕೊಹ್ಲಿ ಪಡೆ ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಕೊನೆಯ ಓವರ್‌ನಲ್ಲಿ 26 ರನ್ ಬೇಕಿದ್ದ ಚೆನ್ನೈ ತಂಡವನ್ನು 1 ರನ್ ನಿಂದ ಕಟ್ಟಿ ಹಾಕುವ ಮೂಲಕ ರೋಚಕ ಗೆಲುವು ಸಾಧಿಸಿದೆ.
ಚೆನ್ನೈ ವಿರುದ್ಧದ ಸತತ ಸೋಲು ಕಂಡಿರುವ ಆರ್ಸಿಬಿ ತಂಡ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟಿಂಗ್ ಮಾಡಿದ್ದು 161 ರನ್ ಪೇರಿಸಿತ್ತು. 162 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈಗೆ ಡೈಲ್ ಸ್ಟೈಲ್ ಆರಂಭಿಕ ಆಘಾತ ನೀಡಿದರು. ಚೆನ್ನೈ 28 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಎಂಎಸ್ ಧೋನಿ ಅದ್ಭುತ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಾರಿಗೆ ತಂದಿಟ್ಟಿದ್ದರು. ಕೊನೆಯ ಓವರ್ ನಲ್ಲಿ 4,6,6,2,6 ರನ್ ಬಾರಿಸಿದ್ದರು. ಈ ವೇಳೆ ಕೊನೆಯ ಎಸೆತದಲ್ಲಿ 2 ರನ್ ಬೇಕಿತ್ತು. ಈ ವೇಳೆ ಭರ್ಜರಿ ಹೊಡೆತಕ್ಕೆ ಧೋನಿ ಮುಂದಾದರು. ಅದು ಸಾಧ್ಯವಾಗದೆ ಚೆಂಡು ನೇರವಾಗಿ ಕೀಪರ್ ಪಾರ್ಥಿವ್ ಪಟೇಲ್ ಕೈಸೇರಿತು. ಈ ವೇಳೆ ಒಂದು ರನ್ ಓಡಲು ಮುಂದಾದ ವೇಳೆ ಪಾರ್ಥಿವ್ ಸ್ಟಂಪ್ ಹೊಡೆದು ರನೌಟ್ ಮಾಡಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಪೇರಿಸಿದೆ. ಇದರೊಂದಿಗೆ ಚೆನ್ನೈಗೆ 162 ರನ್ ಗುರಿ ನೀಡಿತ್ತು.
ಆರ್‌ಸಿಬಿ ಪರ ಪಾರ್ಥಿವ್ ಪಟೇಲ್ 53, ಎಬಿ ಡಿವಿಲಿಯರ್ಸ್ 25, ಮೊಹಿನ್ ಅಲಿ 26 ರನ್ ಪೇರಿಸಿದ್ದಾರೆ. ಚೆನ್ನೈ ಪರ ಬೌಲಿಂಗ್ ನಲ್ಲಿಲ ಚಹಾರ್, ಜಡೇಜಾ ಹಾಗೂ ಡ್ವೈನ್ ಬ್ರಾವೋ ತಲಾ 2 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com