ಐಪಿಎಲ್: ಆರ್‏ಸಿಬಿ ವಿರುದ್ಧ ಸೋತರೂ ಧೋನಿ ದಾಖಲೆ, ಅದು ಯಾವುದು ಗೊತ್ತೇ?

ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ ಜಯದ ಮಾಲೆ ತೊಡಿಸುವಲ್ಲಿ ವಿಫಲರಾಗಿರಬಹುದು, ಆದರೆ ಈ ಪಂದ್ಯದಲ್ಲಿ ಅವರು
ಐಪಿಎಲ್: ಸೋತರೂ ವಿನೂತನ ದಾಖಲೆ ನಿರ್ಮಿಸಿದ ಸಿಎಸ್ ಕೆ ನಾಯಕ ಧೋನಿ, ಆ ದಾಖಲೆ ಯಾವುದು ಗೊತ್ತೇ?
ಐಪಿಎಲ್: ಸೋತರೂ ವಿನೂತನ ದಾಖಲೆ ನಿರ್ಮಿಸಿದ ಸಿಎಸ್ ಕೆ ನಾಯಕ ಧೋನಿ, ಆ ದಾಖಲೆ ಯಾವುದು ಗೊತ್ತೇ?
ಬೆಂಗಳೂರು: ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ ಜಯದ ಮಾಲೆ ತೊಡಿಸುವಲ್ಲಿ ವಿಫಲರಾಗಿರಬಹುದು, ಆದರೆ ಈ ಪಂದ್ಯದಲ್ಲಿ ಅವರು ವಿಶಿಷ್ಠ ದಾಖಲೆಯೊಂದನ್ನು ಬರೆದಿದ್ದಾರೆ. 
ಇಂಡಿಯನ್ ಪ್ರೀಮಿಯರ್ ಲೀಗ್‍ ನಲ್ಲಿ 200 ಸಿಕ್ಸರ್ ಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. 
ಚೆನ್ನೈ, ಬೆಂಗಳೂರು ವಿರುದ್ಧ ವೀರೋಚಿತ ಸೋಲು ಕಂಡಿತು. ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಏಕಾಂಗಿ ಹೋರಾಟ ನಡೆಸಿ ಎಲ್ಲರ ಗಮನ ಸೆಳೆದರು. 48 ಎಸೆತಗಳಲ್ಲಿ ಮಾಹಿ 7 ಸಿಕ್ಸರ್ ಸೇರಿದಂತೆ 84 ರನ್ ಸಿಡಿಸಿದರು. 
ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ 200 ಸಿಕ್ಸರ್ ಬಾರಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಎಂಎಸ್‍ಡಿ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಈ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಳ್ಳುವ ಆಟಗಾರ ಜಮೈಕಾದ ಕ್ರಿಸ್ ಗೇಲ್. ದೈತ್ಯ ಬ್ಯಾಟ್ಸ್ ಮನ್ ಒಟ್ಟು 323 ಸಿಕ್ಸರ್ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್ ತಂಡದ ಬ್ಯಾಟ್ಸ್ ಮನ್ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ 204 ಸಿಕ್ಸರ್ ಬಾರಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.         
ಆರ್.ಸಿ.ಬಿ ವಿರುದ್ಧದ ಪಂದ್ಯದಲ್ಲಿ 7 ಸಿಕ್ಸರ್ ಬಾರಿಸಿರುವ ಮಾಹಿ, ಒಟ್ಟು 203 ಸಿಕ್ಸರ್ ಗಳನ್ನು ಸಿಡಿಸಿ ಬೀಗಿದ್ದಾರೆ. ಚುಟುಕು ಲೀಗ್ ನಲ್ಲಿ ಸಿಕ್ಸರ್ ಬಾರಿಸುವುದರಲ್ಲಿ ಚೆನ್ನೈ ನಾಯಕ ಭಾರತೀಯ ಆಟಗಾರರಿಗಿಂತ ಮುಂದಿದ್ದಾರೆ. ಇದಾದ ನಂತರ ರೋಹಿತ್ ಶರ್ಮಾ (190), ಸುರೇಶ್ ರೈನಾ (190), ಆರ್.ಸಿ.ಬಿ ತಂಡದ ನಾಯಕ ವಿರಾಟ್ ಕೊಹ್ಲಿ (186) ಇದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com