ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಕನಸು ನನಸು, ಬಿಸಿಸಿಐನಿಂದ ಮಹಿಳಾ ಐಪಿಎಲ್ ಟೂರ್ನಿ ಘೋಷಣೆ!

ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಕನಸು ನನಸಾಗುವ ಸಮಯ ಸನಿಹವಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹಿಳಾ ಕ್ರಿಕೆಟ್ ಟೂರ್ನಿಯನ್ನು ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಕನಸು ನನಸಾಗುವ ಸಮಯ ಸನಿಹವಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹಿಳಾ ಕ್ರಿಕೆಟ್ ಟೂರ್ನಿಯನ್ನು ಘೋಷಣೆ ಮಾಡಿದೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್​ ಪ್ರೀಮಿಯರ್​ ಲೀಗ್ ನ ಪ್ಲೇ ಆಫ್​ ಪಂದ್ಯಾವಳಿ ಸಮಯಕ್ಕೆ ಸರಿಯಾಗಿ ಮಹಿಳೆಯರ ಟಿ-20 ಚಾಲೆಂಜ್​ ಪಂದ್ಯಾವಳಿಗಳು ನಡೆಯಲಿವೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಈ ಸಂಬಂಧ ಮಾಹಿತಿ ನೀಡಿರುವ ಬಿಸಿಸಿಐ ಒಟ್ಟು ಮೂರು ತಂಡಗಳು ಒಂದೊಂದು ತಂಡದ ವಿರುದ್ಧವೂ ತಲಾ 2 ಮ್ಯಾಚ್​ ಗಳನ್ನು ಆಡಲಿದ್ದು, ಅಂತಿಮವಾಗಿ ಟಾಪ್​ 2 ಟೀಮ್ ​ಗಳು ಪರಸ್ಪರ ಪ್ರಶಸ್ತಿಗಾಗಿ ಮೇ 11 ರಂದು ಸೆಣಸಾಡಲಿದೆ ಎಂದು ತಿಳಿಸಿದೆ. 
ಇನ್ನು ವಿಶ್ವದ ಶ್ರೇಷ್ಟ ಕ್ರಿಕೆಟ್ ತಾರೆಯರ ಜೊತೆ ವುಮೆನ್ಸ್​ ಟೀಂ ಇಂಡಿಯಾದ ಫ್ಯೂಚರ್ಸ್​ ಸ್ಟಾರ್ ಗಳು ಮೂರು ತಂಡಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೆಲ್ಲರ ಟ್ಯಾಲೆಂಟ್ ಗಳನ್ನು ಒರೆಗೆ ಹಚ್ಚುವ ಸಲುವಾಗಿ ಈ ಮ್ಯಾಚ್ ಗಳು ನಡೆಯಲಿವೆ ಎಂದು ಬಿಸಿಸಿಐ ತಿಳಿಸಿದೆ. ಇನ್ನೂ ಮೇ 6 ರಂದು ಸೂಪರ್ ನೋವಾ ಹಾಗೂ ಟ್ರಯಲ್​ ಬ್ಲೇಜರ್ಸ್​ ಮಧ್ಯೆ ಮ್ಯಾಚ್​ ನಡೆಯಲಿದ್ದು, ಇನ್ನೊಂದೆಡೆ ವಲೋಸಿಟಿ ತಂಡ ಸೂಪರ್​ ನೋವಾದ ಜೊತೆ ಮೇ 8 ರಂದು ಸೆಣೆಸಾಡಲಿದೆ. ಈ ಎಲ್ಲಾ ಮ್ಯಾಚ್​ ಗಳು ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com