ಚೆನ್ನೈ ವಿರುದ್ಧ ಆರ್‌ಸಿಬಿಗೆ 1 ರನ್ ರೋಚಕ ಗೆಲುವಿಗೆ ಪಂಜಾಬ್ ನಾಯಕ ಅಶ್ವಿನ್ ಕಾರಣ? ಅದು ಹೇಗೆ ಅಂತೀರಾ?

ಚೆನ್ನೈ ವಿರುದ್ಧ ಸತತ ಸೋಲಿಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಮೊನ್ನೆ ನಡೆದ ಪಂದ್ಯದಲ್ಲಿ 1 ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಚೆನ್ನೈ ವಿರುದ್ಧ ಸತತ ಸೋಲಿಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಮೊನ್ನೆ ನಡೆದ ಪಂದ್ಯದಲ್ಲಿ 1 ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು. ಅದಕ್ಕೆ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್ ಕಾರಣ ಎಂಬ ಚರ್ಚೆ ಶುರುವಾಗಿದೆ.
ಹೌದು, ಪಂದ್ಯದ ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ಶಾರ್ದೂಲ್ ಠಾಕೂರ್ ರನ್ನು ಆರ್‌ಸಿಬಿ ಕೀಪರ್ ಪಾರ್ಥಿವ್ ಪಟೇಲ್ ರನೌಟ್ ಮಾಡಿದ್ದರು. ಇದರೊಂದಿಗೆ ಆರ್‌ಸಿಬಿ 1 ರನ್ ನಿಂದ ರೋಚಕ ಗೆಲುವು ಸಾಧಿಸಿತ್ತು. 
ಈ ರೋಚಕ ಗೆಲುವಿಗೆ ಟೂರ್ನಿಯಲ್ಲಿ ಆರ್ ಅಶ್ವಿನ್ ಮಂಕಡ್ ರನೌಟ್ ಮಾಡಿದ್ದರು. ಆ ಬಳಿಕ ನಾನ್ ಸ್ಟ್ರೈಕ್ ನಲ್ಲಿದ್ದ ಆಟಗಾರರು ಬೇಗನೆ ಕ್ರಿಸ್ ಬಿಡುವುದನ್ನು ಬಿಟ್ಟಿದ್ದಾರೆ. ಬೌಲರ್ ಬೌಲಿಂಗ್ ಮಾಡಿದ ನಂತರ ನಾನ್ ಸ್ಟ್ರೈಕ್ ಆಟಗಾರರು ರನ್ ಓಡಲು ಮುಂದಾಗುತ್ತಿದ್ದು ಇದೇ ಕಾರಣ ಎಂಬ ವಿವರಣೆಯನ್ನು ಮುಂದಿಟ್ಟುಕೊಂಡು ಕ್ರಿಕೆಟ್ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ.
ಕೊನೆಯ ಓವರ್ ನ ಅಂತಿಮ ಎಸೆತದಲ್ಲಿ ಚೆನ್ನೈಗೆ ಗೆಲ್ಲಲು 2 ರನ್ ಬೇಕಿತ್ತು. ಈ ವೇಳೆ ಧೋನಿ ಚೆಂಡನ್ನು ಮಿಸ್ ಮಾಡಿದ್ದರಿಂದ ಚೆಂಡು ನೇರವಾಗಿ ಕೀಪರ್ ಪಾರ್ಥಿವ್ ಪಟೇಲ್ ಕೈಸೇರಿತ್ತು. ಈ ವೇಳೆ 1 ರನ್ ತೆಗೆದುಕೊಂಡು ಪಂದ್ಯವನ್ನು ಡ್ರಾ ಮಾಡಲು ಧೋನಿ ಯತ್ನಿಸಿದ್ದರು. ಆದರೆ ಶಾರ್ದೂಲ್ ಠಾಕೂರ್ ಲೇಟಾಗಿ ಕ್ರೀಸ್ ಬಿಟ್ಟಿದ್ದರಿಂದ ಕೇವಲ 16 ಸೆ.ಮೀ ಅಂತರದಲ್ಲಿ ಪಾರ್ಥಿವ್ ರನೌಟ್ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com