ಐಪಿಎಲ್ ನಲ್ಲಿ CSK ಸಕ್ಸಸ್, ಈ ನಿಜ ಹೇಳಿದ್ರೆ ಧೋನಿಗೆ ಆಪಾಯವಂತೆ: ಇಷ್ಟಕ್ಕೂ ಕೂಲ್ ಕ್ಯಾಪ್ಟನ್ ಹೇಳಿದ್ದೇನು?

ಐಪಿಎಲ್ ಟೂರ್ನಿಯಲ್ಲಿನ ತಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಟ್ಟರೆ ತಮಗೇ ಅಪಾಯವೆಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

Published: 24th April 2019 12:00 PM  |   Last Updated: 24th April 2019 03:08 AM   |  A+A-


They won't buy me at auctions if I reveal CSK's success mantra, says MS Dhoni

ಸಂಗ್ರಹ ಚಿತ್ರ

Posted By : SVN SVN
Source : Online Desk
ಚೆನ್ನೈ: ಐಪಿಎಲ್ ಟೂರ್ನಿಯಲ್ಲಿನ ತಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಟ್ಟರೆ ತಮಗೇ ಅಪಾಯವೆಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಹಾಲಿ ಐಪಿಎಲ್ 2019 ಟೂರ್ನಿಯಲ್ಲಿ ಚೆನ್ನೈ ತಂಡದ ಯಶಸ್ಸು ಮುಂದುವರೆದಿದ್ದು, ತಾನಾಡಿದ 11 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಜಯಭೇರಿ ಭಾರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.

ನಿನ್ನೆ ಚೆನ್ನೈನಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗಳ ಜಯ ಸಾಧಿಸಿ ತನ್ನ ಗೆಲುವಿನ ಖಾತೆಗೆ ಮತ್ತೊಂದು ಪಂದ್ಯವನ್ನು ಸೇರಿಸಿಕೊಂಡಿತು. ಆ ಮೂಲಕ ಅಂಕ ಪಟ್ಟಿಯಲ್ಲಿ ಚೆನ್ನೈ ತಂಡ ಅಗ್ರ ಸ್ಥಾನಿಯಾಗಿ ಮುಂದುವರೆದಿದೆ.

ಇನ್ನು ಚೆನ್ನೈ ತಂಡದ ಯಶಸ್ಸಿನ ಕುರಿತು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾತನಾಡಿದ್ದು, ಹೈದರಾಬಾದ್ ತಂಡದ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ ಧೋನಿ ತಂಡದ ಯಶಸ್ಸಿನ ಸಂಪೂರ್ಣ ಶ್ರೇಯ ತಂಡದ ಆಡಳಿತ ಸಿಬ್ಬಂದಿ, ಹಾಗೂ ತಂಡದ ಅಭಿಮಾನಿಗಳಿಗೆ ಸಲ್ಲಬೇಕು ಎಂದು ಹೇಳಿದ್ದಾರೆ.

ಅಂತೆಯೇ ತಂಡದ ಯಶಸ್ಸಿನ ಗುಟ್ಟಿನ ಕುರಿತು ಮಾತನಾಡಿದ ಧೋನಿ ತಂಡದ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಟ್ಟರೆ ಮುಂದಿನ ಐಪಿಎಲ್ ಟೂರ್ನಿಗೆ ಫ್ರಾಂಚೈಸಿಗಳು ನನ್ನನ್ನು ಖರೀದಿ ಮಾಡುವುದಿಲ್ಲ ಎಂದು ಹ್ಯಾಸ್ಯ ಚಟಾಕಿ ಹಾರಿಸಿದ್ದಾರೆ.  ಇದೇ ವೇಳೆ ಮುಂಬರುವ ವಿಶ್ವಕಪ್ ಟೂರ್ನಿ ಕುರಿತು ಮಾತನಾಡಿದ ಧೋನಿ, ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇದ್ದು, ಸಾಕಷ್ಟು ಪರಿಶ್ರಮ ವಹಿಸಿ ಆಡಬೇಕಿದೆ ಎಂದು ಹೇಳಿದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp