ತಿರುಗೇಟು ಅಂದ್ರೆ ಇದೇನಾ..?; ಆಕ್ರೋಶಿತ ಸೆಂಡ್ ಆಫ್ ಕೊಟ್ಟ ಅಶ್ವಿನ್ ಗೆ ಭರ್ಜರಿ ಟಾಂಗ್ ಕೊಟ್ಟ ಕೊಹ್ಲಿ!

ಕ್ರಿಕೆಟ್ ಲೋಕದಲ್ಲಿ ಅತ್ಯಂತ ಆಕ್ರಮಣಕಾರಿ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂಬರ್ 1 ಎನ್ನಬಹುದು. ಆದರೆ ಅಂತಹ ಕೊಹ್ಲಿಯನ್ನೇ ಕೆಣಕಿ ಬದುಕುವುದುಂಟೇ..

Published: 25th April 2019 12:00 PM  |   Last Updated: 25th April 2019 05:18 AM   |  A+A-


Watch: RCB vs KXIP: Virat Kohli Gives An Abusive Send-Off To Ravichandran Ashwin

ಸಂಗ್ರಹ ಚಿತ್ರ

Posted By : SVN SVN
Source : Online Desk
ಬೆಂಗಳೂರು: ಕ್ರಿಕೆಟ್ ಲೋಕದಲ್ಲಿ ಅತ್ಯಂತ ಆಕ್ರಮಣಕಾರಿ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂಬರ್ 1 ಎನ್ನಬಹುದು. ಆದರೆ ಅಂತಹ ಕೊಹ್ಲಿಯನ್ನೇ ಕೆಣಕಿ ಬದುಕುವುದುಂಟೇ..

ಹೌದು.. ವಿರಾಟ್ ಕೊಹ್ಲಿಯನ್ನು ಕೆಣಕಿ ತಿರುಗೇಟು ಪಡೆದ ಆಟಗಾರರ ಪಟ್ಟಿಗೆ ಇದೀಗ ಮತ್ತೋರ್ವ ಆಟಗಾರನ ಸೇರ್ಪಡೆಯಾಗಿದ್ದು, ಅದು ಬೇರಾರು ಅಲ್ಲ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ ಆರ್ ಅಶ್ವಿನ್..

ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಮತ್ತು ಬೆಂಗಳೂರು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ 202  ರನ್ ಗಳಿಸಿತ್ತು. 13 ರನ್ ಗಳಿಸಿ ಆಗ ತಾನೆ ಕ್ರೀಸ್ ಗೆ ಹೊಂದಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿಯನ್ನು ಮಹಮದ್ ಶಮಿ ಔಟ್ ಮಾಡಿದರು. ಆದರೆ ಈ ವೇಳೆ ತಂಡದ ನಾಯಕ ಆರ್ ಅಶ್ವಿನ್ ಕೊಹ್ಲಿಯನ್ನು ದಿಟ್ಟಿಸಿ ಆಕ್ರಮಣಕಾರಿ ಸೆಂಡ್ ಆಫ್ ಕೊಟ್ಟರು. ಇದು ಮೈದಾನದ ಕ್ಯಾಮೆರಾಗಳಲ್ಲಿ ದಾಖಲಾಗಿತ್ತು.

ಬಳಿಕ ಆರ್ ಸಿಬಿ ನೀಡಿದ್ದ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 185 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಪಂದ್ಯದ ಅಂತಿಮ ಓವರ್ ನಲ್ಲಿ 26 ರನ್ ಗಳು  ಬೇಕಿತ್ತು. ಈ ವೇಳೆ ಕ್ರೀಸ್ ನಲ್ಲಿದ್ದ ಅಶ್ವಿನ್ ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿ ಪಂಜಾಬ್ ತಂಡದ ಗೆಲುವಿನ ಆಸೆಗೆ ನೀರೆರೆದರು. ಆದರೆ ನಂತರದ ಎಸೆತದಲ್ಲೇ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾದರು. ಆದರೆ ಈ ವೇಳೆ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು. ಈ ವೇಳೆ ಕೊಹ್ಲಿ ಕೂಡ ಅಶ್ವಿನ್ ಗೆ 'ಏನಾಯಿತು ನಿನ್ನ ಅಟ್ಟಹಾಸ, ಈಗ ಮಂಕಡ್ ರನೌಟ್ ಮಾಡು ನೋಡೋಣ' ಎನ್ನುವ ರೀತಿಯಲ್ಲಿ ಸನ್ಹೆ ಮಾಡುತ್ತಾ ಅಶ್ವಿನ್ ಗೆ ತಿರುಗೇಟು ನೀಡಿದರು. 

ಕೊಹ್ಲಿ ಪ್ರತಿಕ್ರಿಯೆಯಿಂದ ಆಕ್ರೋಶಗೊಂಡ ಅಶ್ವಿನ್ ಪೆವಿಲಿಯನ್ ಹತ್ತಿರ ಬರುತ್ತಲೇ ತಮ್ಮ ಕೈಗೆ ಹಾಕಿದ್ದ ಗ್ಲೌಸ್ ಅನ್ನು ಕಿತ್ತು ಕೆಳಗೆ ಎಸೆದರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಈ ವಿಡಿಯೋ ಮೂಲಕ ಅಶ್ವಿನ್ ರನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟ್ರೋಲ್ ಮಾಡಲಾಗುತ್ತಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp