ವಿಶ್ವಕಪ್ ಸರಣಿಗೆ ಆಯ್ಕೆಯಾಗದ ಹಿನ್ನಲೆ, ಹೊಸ ತಂಡದಲ್ಲಿ ರಹಾನೆ..!

ಐಸಿಸಿ ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಂಪಾದಿಸುವಲ್ಲಿ ವಿಫಲರಾಗಿರುವ ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಇದೀಗ ಕೌಂಟಿ ಕ್ರಿಕೆಟ್ ನತ್ತ ಮುಖ ಮಾಡಿದ್ದಾರೆ.

Published: 26th April 2019 12:00 PM  |   Last Updated: 26th April 2019 02:57 AM   |  A+A-


Hampshire sign Ajinkya Rahane as Markram replacement

ಸಂಗ್ರಹ ಚಿತ್ರ

Posted By : SVN SVN
Source : Online Desk
ನವದೆಹಲಿ: ಐಸಿಸಿ ವಿಶ್ವಕಪ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಂಪಾದಿಸುವಲ್ಲಿ ವಿಫಲರಾಗಿರುವ ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಇದೀಗ ಕೌಂಟಿ ಕ್ರಿಕೆಟ್ ನತ್ತ ಮುಖ ಮಾಡಿದ್ದಾರೆ.

ಹೌದು.. ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ ತಂಡವಾದ ಹ್ಯಾಂಪ್‌ ಶೈರ್‌ ಜತೆ ಒಪ್ಪಂದಕ್ಕೆ ರಹಾನೆ ಸಹಿ ಹಾಕಿದ್ದು, ಮೇ ತಿಂಗಳಿಂದ ಜುಲೈವರೆಗೂ ರಹಾನೆ ಒಟ್ಟು 8 ಪಂದ್ಯಗಳನ್ನು ಆಡಲಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಏಡನ್‌ ಮಾರ್ಕ್ರಾಮ್‌ ಸ್ಥಾನವನ್ನು ರಹಾನೆ ತುಂಬಲಿದ್ದಾರೆ. 

ಮೇ 14ರಂದು ಎಡ್ಜ್‌ ಬಾಸ್ಟನ್‌ ನಲ್ಲಿ ವಾರ್ವಿಕ್ ಶೈರ್‌ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅವರು ಕೌಂಟಿ ಕ್ರಿಕೆಟ್‌ ಗೆ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ವಿಶ್ವಕಪ್‌ ಬಳಿಕ ಭಾರತ ತಂಡ ವಿಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, ಭಾರತದ ಚೇತೇಶ್ವರ ಪೂಜಾರ ಸೇರಿದಂತೆ 7 ಟೆಸ್ಟ್‌ ಸ್ಪೆಷಲಿಸ್ಟ್ ಆಟಗಾರರು ಕೌಂಟಿಯಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅಂತೆಯೇ ಭಾರತದಿಂದ ಹ್ಯಾಂಪ್ ಶೈರ್‌ ಪರ ಆಡಲಿರುವ ಮೊದಲ ಆಟಗಾರ ಎನ್ನುವ ಹಿರಿಮೆಗೆ ರಹಾನೆ ಪಾತ್ರರಾಗಲಿದ್ದಾರೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp