ಆರ್​ಸಿಬಿಗೆ ದೊಡ್ಡ ಹೊಡೆತ: ಡೇಲ್ ಸ್ಟೈನ್ ಬಳಿಕ ತಂಡವನ್ನು ತೊರೆಯಲಿರುವ ಇಬ್ಬರು ಸ್ಟಾರ್ ಆಟಗಾರರು!

ಸತತ ಆರು ಪಂದ್ಯಗಳ ಸೋಲಿನ ಬಳಿಕ ಇದೀಗ ಆರ್​ಸಿಬಿ ತಂಡ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಇದರ ಮಧ್ಯೆ ತಂಡಕ್ಕೆ ಆಧಾರಸ್ಥಂಭವಾಗಿದ್ದ ಇಬ್ಬರು ಆಟಗಾರರು ಟೂರ್ನಿಯಿಂದ ಹೊರಹೋಗುತ್ತಿದ್ದಾರೆ.
ವಿರಾಟ್ ಕೊಹ್ಲಿ-ಎಬಿಡಿ
ವಿರಾಟ್ ಕೊಹ್ಲಿ-ಎಬಿಡಿ
ಸತತ ಆರು ಪಂದ್ಯಗಳ ಸೋಲಿನ ಬಳಿಕ ಇದೀಗ ಆರ್​ಸಿಬಿ ತಂಡ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಇದರ ಮಧ್ಯೆ ತಂಡಕ್ಕೆ ಆಧಾರಸ್ಥಂಭವಾಗಿದ್ದ ಇಬ್ಬರು ಆಟಗಾರರು ಟೂರ್ನಿಯಿಂದ ಹೊರಹೋಗುತ್ತಿದ್ದಾರೆ.
ಮೇ 29ರಿಂದ ಐಸಿಸಿ ವಿಶ್ವಕಪ್ ಪಂದ್ಯಾವಳಿ ಆರಂಭಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡದಿಂದ ಕರೆ ಬಂದಿದ್ದರಿಂದ ಮೊಯಿನ್ ಅಲಿ ಮತ್ತು ಮಾರ್ಕಸ್ ಸ್ಟೋಯ್ನಿಸ್ ಸ್ವದೇಶಕ್ಕೆ ಮರಳಬೇಕಾಗಿದೆ. 
ಇದೀಗ ಈ ವಿದೇಶಿ ಆಟಗಾರರ ಗೈರಿಯಲ್ಲಿ ಕೊನೆಯ 2-3 ಪಂದ್ಯ ಆಡಬೇಕಾಗಿದೆ. ಇನ್ನು ಹೊರ ಹೋಗುತ್ತಿರುವ ಆಟಗಾರರ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಹಿನ್ನೆಲೆಯಲ್ಲಿ ಮುಂಬರುವ ಪಂದ್ಯಗಳಲ್ಲಿ ಗೆಲುವು ಕಠಿಣವಾಗಿಲಿದೆ.
ಇದೀಗ ಮೊಹಿನ್ ಅಲಿ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಬದಲಿಗೆ ಶಿಮ್ರಾನ್ ಹೆಟ್ಮರ್, ಕೊಲಿನ್ ಡಿ ಗ್ರ್ಯಾಂಡ್ ಹೊಮೆ ಮತ್ತು ಟಿಮ್ ಸೌಥಿ ಈ ಮೂವರಲ್ಲಿ ಇಬ್ಬರ ಆಯ್ಕೆಗೆ ಆರ್ಸಿಬಿ ತಂಡ ಪ್ರಯತ್ನ ನಡೆಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com