ಐಸಿಸಿ ವಿಶ್ವಕಪ್‌: ಭಾರತದ ಅಂಪೈರ್‌ ಸುಂದರಮ್‌ ರವಿಗೆ ತೀರ್ಪುಗಾರರ ಪಟ್ಟಿಯಲ್ಲಿ ಸ್ಥಾನ

ಇಂಗ್ಲೆಂಡ್‌ನಲ್ಲಿ ಮೇ. 30 ರಂದು ಆರಂಭವಾಗುವ ಐಸಿಸಿ ವಿಶ್ವಕಪ್‌ ಮಹತ್ವದ ಟೂರ್ನಿಗೆ ತೀರ್ಪುಗಾರರ ಪಟ್ಟಿ ಹಾಗೂ ರೆಫರಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಶುಕ್ರವಾರ ಅಧಿಕೃತವಾಗಿ ಬಿಟುಗಡೆ ಮಾಡಿದೆ
ಸುಂದರಮ್‌ ರವಿ
ಸುಂದರಮ್‌ ರವಿ

ದುಬೈ: ಇಂಗ್ಲೆಂಡ್‌ನಲ್ಲಿ ಮೇ. 30 ರಂದು ಆರಂಭವಾಗುವ ಐಸಿಸಿ ವಿಶ್ವಕಪ್‌ ಮಹತ್ವದ ಟೂರ್ನಿಗೆ ತೀರ್ಪುಗಾರರ ಪಟ್ಟಿ ಹಾಗೂ ರೆಫರಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಶುಕ್ರವಾರ ಅಧಿಕೃತವಾಗಿ ಬಿಟುಗಡೆ ಮಾಡಿದೆ. ಭಾರತದ ಏಕೈಕ ಅಂಪೈರ್‌ ಸುಂದರಮ್‌  ರವಿ ಅವರು ಐಸಿಸಿ ಬಿಡುಗಡೆ ಮಾಡಿದ ತೀರ್ಪುಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫ್ರಂಟ್‌ ಪೂಟ್‌ ನೋ ಬಾಲ್‌ ನೀಡುವಲ್ಲಿ ನಿರಾಕರಿಸಿದ್ದ ಸುಂದರಮ್‌ ರವಿ, ವಿವಾದ ಸೃಷ್ಟಿಸಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ ಆರು ರನ್‌ಗಳಿಂದ ಸೋಲು ಅನುಭವಿಸಿತ್ತು. ಇವರು ಕಳೆದ ತಿಂಗಳಿನಲ್ಲಷ್ಟೆ ಐಸಿಸಿ ಎಲೈಟ್‌ ಪ್ಯಾನಲ್‌ ದರ್ಜೆಯ ತೀರ್ಪುಗಾರರಾಗಿ ಮುಂಬಡ್ತಿ ಪಡೆದಿದ್ದರು.

ಅನುಭವಿ ಅಂಪೈರ್‌ ಶ್ರೀಲಂಕಾದ ರಂಜನ್‌ ಮದುಗಾಲೆ ಅವರು ಆರನೇ ಬಾರಿ ವಿಶ್ವಕಪ್‌ ಟೂರ್ನಿಯಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಲಿದ್ದಾರೆ. ಕ್ರಿಸ್‌ ಬ್ರಾಡ್‌ ಹಾಗೂ ಜೆಫ್‌ ಕ್ರೋ ಅವರ ಪಾಲಿಗೆ ಇದು ನಾಲ್ಕನೇ ಬಾರಿಯಾಗಿದೆ.ಅಲೀಮ್‌ ದಾರ್‌ ಅವರು ಐದನೇ ಬಾರಿ ವಿಶ್ವಕಪ್‌ ಟೂರ್ನಿಯಲ್ಲಿ ಅಂಪೈರ್‌ ಆಗಿ ಸೇವೆ ಸಲ್ಲಿಸಲು ತಯಾರಾಗಿದ್ದಾರೆ. ಇಯಾನ್‌ ಗೌಲ್ಡ್‌ ಅವರ ಪಾಲಿಗೆ ನಾಲ್ಕನೇ ಹಾಗೂ ಅಂತಿಮ ಟೂರ್ನಿ ಇದಾಗಿದ್ದು, ವಿಶ್ವಕಪ್‌ ಬಳಿಕ ಅಂಪೈರ್‌ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಲಿದ್ದಾರೆ.

ಮೇ. 30 ರಂದು ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮೂರು ವಿಶ್ವಕಪ್‌ ಗೆದ್ದ ತಂಡದ ಸದಸ್ಯರು ಐಸಿಸಿ ರೆಫರಿ ಹಾಗೂ ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1987ರಲ್ಲಿ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ತಂಡದಲ್ಲಿ ಸದಸ್ಯರಾಗಿದ್ದ ಡೇವಿಡ್‌ ಬೂನ್‌ ಅವರು ಪಂದ್ಯ ರೆಫರಿ, ಶ್ರೀಲಂಕಾದ ಕುಮಾರ ಧರ್ಮಸೇನಾ ಹಾಗೂ ಬ್ರೂಸ್‌ ಆಕ್ಸೆನ್‌ಫರ್ಡ್‌ ಅವರು ತೀರ್ಪುಗಾರರಾಗಿ ಸೇವೆ ಸಲ್ಲಿಸಲಿದ್ದಾರೆ. ಮೂರನೇ ಅಂಪೈರ್‌ ಆಗಿ ಪಾಲ್‌ ರೀಫೆಲ್ ಕಾರ್ಯ ನಿರ್ವಹಿಸಲಿದ್ದಾರೆ.

ರೆಫರಿಗಳು: ಕ್ರಿಸ್ ಬ್ರಾಡ್, ಡೇವಿಡ್ ಬೂನ್, ಆಂಡಿ ಪೈಕ್ರೊಫ್ಟ್, ಜೆಫ್ ಕ್ರೋವ್, ರಂಜನ್ ಮದುಗಾಲೆ, ರಿಚೀ ರಿಚರ್ಡ್ಸನ್

ತೀರ್ಪುಗಾರರು:
ಅಲೀಮ್ ದಾರ್, ಕುಮಾರ್ ಧರ್ಮಸೇನ, ಮರೀಸ್ ಎರಸ್ಮಸ್, ಕ್ರಿಸ್ ಗ್ಯಾಫನಿ, ಇಯಾನ್ ಗೌಲ್ಡ್, ರಿಚರ್ಡ್ ಇಲಿಂಗ್ ವರ್ತ್, ರಿಚರ್ಡ್ ಕೆಟಲ್ಬರೋ, ನಿಗೆಲ್ ಲಾಂಗ್, ಬ್ರೂಸ್ ಆಕ್ಸೆನ್‌ ಫರ್ಡ್, ಸುಂದರಮ್‌ ರವಿ, ಪಾಲ್ ರೀಫೆಲ್, ರಾಡ್ ಟಕರ್, ಜೋಯಲ್ ವಿಲ್ಸನ್, ಮೈಕೇಲ್ ಗೌಗ್, ರುಚಿರಾ ಪಲ್ಯಗುಗುಜ್, ಪಾಲ್ ವಿಲ್ಸನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com