ಕ್ಲೈರ್‌ ಪೊಲೊಸಾಕ್‌: ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಮೊದಲ ಮಹಿಳಾ ಅಂಪೈರ್

ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಆಯ್ಕೆಯಾಗುವ ಮೂಲಕ ಕ್ಲೈರ್‌ ಪೊಲೊಸಾಕ್‌ ಇತಿಹಾಸ ನಿರ್ಮಿಸಿದ್ದಾರೆ.
ಕ್ಲೈರ್‌ ಪೊಲೊಸಾಕ್‌
ಕ್ಲೈರ್‌ ಪೊಲೊಸಾಕ್‌
ದುಬೈ: ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಆಯ್ಕೆಯಾಗುವ ಮೂಲಕ ಕ್ಲೈರ್‌ ಪೊಲೊಸಾಕ್‌ ಇತಿಹಾಸ ನಿರ್ಮಿಸಿದ್ದಾರೆ. 
ಆ ಮೂಲಕ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ ಮೊದಲ ಮಹಿಳಾ ಅಂಪೈರ್ ಎಂಬ ಕೀರ್ತಿಗೆ ಕ್ಲೈರ್‌ ಪೊಲೊಸಾಕ್‌ ಭಾಜನರಾಗಿದ್ದಾರೆ. ನಮೀಬಿಯಾ ಹಾಗೂ ಓಮನ್‌ ನಡುವಿನ ವಿಶ್ವ ಕ್ರಿಕೆಟ್‌ ಲೀಗ್‌ ಎರಡನೇ ಡಿವಿಷನ್‌ ಫೈನಲ್‌ ಪಂದ್ಯದಲ್ಲಿ ಕ್ಲೈರ್‌ ಪೊಲೊಸಾಕ್‌ ಅವರು ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಆ ಮೂಲಕ ಪುರುಷರ ಏಕದಿನ ಪಂದ್ಯದಲ್ಲಿ ಸೇವೆ ಸಲ್ಲಸಿದ ವಿಶ್ವದ ಮೊದಲ ಮಹಿಳಾ ಅಂಪೈರ್‌ ಎಂಬ ಕೀರ್ತಿಗೆ ಆಸ್ಟ್ರೇಲಿಯಾದ ಕ್ಲೈರ್ ಭಾಜನರಾಗಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಲೈರ್‌ ಪೊಲೊಸಾಕ್‌, 'ಪುರುಷರ ಏಕದಿನ ಪಂದ್ಯಕ್ಕೆ ತೀರ್ಪುಗಾರರಾಗಿ ನನ್ನನ್ನು ಆಯ್ಕೆ ಮಾಡುವ ಕುರಿತು ನಿರೀಕ್ಷೆ ಮಾಡಿರಲಿಲ್ಲ. ವೃತ್ತಿ ಜೀವನದ ಮೊದಲ ಪಂದ್ಯದಲ್ಲಿ ಉನ್ನತ ಮಟ್ಟದಲ್ಲಿ ಸೇವೆ ಸಲ್ಲಿಸಲು ಉತ್ಸಾಹದಲ್ಲಿದ್ದೇನೆ. ಸಹ ತೀರ್ಪುಗಾರರಿಗೆ ಸೂಕ್ತ ರೀತಿಯಲ್ಲಿ ಸ್ಪಂಧಿಸಲಾಗುವುದದು' ಎಂದು  ಸಂತಸ ವ್ಯಕ್ತಪಡಿಸಿದ್ದಾರೆ.
ಕ್ಲೈರ್‌ ಪೊಲೊಸಾಕ್‌ ಅವರು ಪುರುಷರ ಪಂದ್ಯಕ್ಕೆ ತೀರ್ಪುಗಾರರಾಗಿ ಸೇವೆ ಸಲ್ಲಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕಿಂತ ಮೊದಲು 2017ರಲ್ಲಿ ಆಸ್ಟ್ರೇಲಿಯಾ ದೇಶೀಯ ಪಂದ್ಯಗಳಲ್ಲಿ ಅಂಪೈರ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಐಸಿಸಿ ಟಿ-20 ಮಹಿಳಾ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಐಸಿಸಿ ಅಧಿಕೃತ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ಕೀರ್ತಿಗೂ ಕ್ಲೈರ್‌ ಭಾಜನರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com