ಸ್ಟಂಪ್ ಅಥವಾ ಕ್ಯಾಚ್? ಮನೀಶ್‌ನನ್ನು ಧೋನಿಯಂತೆ ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದ ಸಂಜು, ವಿಡಿಯೋ ವೈರಲ್!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಎಂಎಸ್ ಧೋನಿಯಂತೆ ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿ ಮನೀಶ್ ಪಾಂಡೆಯನ್ನು ಔಟ್...

Published: 28th April 2019 12:00 PM  |   Last Updated: 28th April 2019 03:21 AM   |  A+A-


Sanju Samson-Manish Pandey

ಸಂಜು ಸ್ಯಾಮ್ಸನ್-ಮನೀಶ್ ಪಾಂಡೆ

Posted By : VS VS
Source : Online Desk
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಎಂಎಸ್ ಧೋನಿಯಂತೆ ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿ ಮನೀಶ್ ಪಾಂಡೆಯನ್ನು ಔಟ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಸವಾಯ್ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಂಜು 32 ಎಸೆತಗಳಲ್ಲಿ 48 ರನ್ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ವೇಳೆ ಕೀಪಿಂಗ್ ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವ ಸಂಜು ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಹೈದರಾಬಾದ್ ತಂಡದ ಮನೀಷ್ ಪಾಂಡೆಯನ್ನು ಔಟ್ ಮಾಡಿ ಪೆವಿಲಿಯನ್ ಗೆ ಕಳುಹಿಸಿದರು.

ಟೂರ್ನಿಯಲ್ಲಿ ರಾಜಸ್ತಾನ 12 ಪಂದ್ಯಗಳ ಪೈಕಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಈ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ. 
Stay up to date on all the latest ಕ್ರಿಕೆಟ್ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp