ಹೈದರಾಬಾದ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ: ಪ್ಲೇ ಆಫ್ ಕನಸು ಜೀವಂತ!

ರಾಜಸ್ಥಾನ್ ರಾಯಲ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಿದ್ದು, ಐಪಿಎಲ್ ನ ಈ ಸೀಸನ್ ನ ಪ್ಲೇ ಆಫ್ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿದೆ.

Published: 28th April 2019 12:00 PM  |   Last Updated: 28th April 2019 01:17 AM   |  A+A-


Three takeaways as RR cruise past SRH

ಹೈದರಾಬಾದ್ ತಂಡದ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ: ಪ್ಲೇ ಆಫ್ ಕನಸು ಜೀವಂತ!

Posted By : SBV SBV
Source : The New Indian Express
ಜೈಪುರ: ರಾಜಸ್ಥಾನ್ ರಾಯಲ್ಸ್ ತಂಡ ಹೈದರಾಬಾದ್ ಸನ್ ರೈಸರ್ಸ್ ವಿರುದ್ಧ 7 ವಿಕೆಟ್ ಗಳ ಜಯ ದಾಖಲಿಸಿದ್ದು, ಐಪಿಎಲ್ ನ ಈ ಸೀಸನ್ ನ  ಪ್ಲೇ ಆಫ್ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿದೆ. 

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಏ.27 ರ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಟಾಸ್ ಗೆದ್ದು ಬೌಲಿಂಗ್ ನ್ನು ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ತಂಡ ಹೈದರಾಬಾದ್ ತಂಡವನ್ನು 160 ರನ್ ಗಳಿಗೆ  ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು. 

ಹೈದರಾಬಾದ್ ತಂಡ ನೀಡಿದ ಗುರಿಯನ್ನು 19.1 ಓವರ್ ಗಳಲ್ಲಿ ತಲುಪಿದ ರಾಜಸ್ಥಾನ್ ರಾಯಲ್ಸ್ ತಂಡ 7 ವಿಕೆಟ್ ಗಳ ಜಯ ಗಳಿಸಿದೆ. ಈ ಗೆಲುವಿನ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 6 ನೇ ಸ್ಥಾನದಲ್ಲಿದ್ದು, 12 ಪಂದ್ಯಗಳಿಂದ 10 ಪಾಯಿಂಟ್ ಗಳನ್ನು ಗಳಿಸುವ ಮೂಲಕ ಪ್ಲೇ ಆಫ್ ಪಟ್ಟಿಯಲ್ಲಿ ಬರುವ ಸಾಧ್ಯತೆಯನ್ನು ಇನ್ನೂ ಉಳಿಸಿಕೊಂಡಿದೆ. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp