ಐಪಿಎಲ್ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಆರ್ಸಿಬಿ, ಭಾರತದಲ್ಲಿ ಫಸ್ಟ್, ಜಗತ್ತಿನಲ್ಲಿ 3ನೇ ತಂಡ!

ಸತತ ಆರು ಪಂದ್ಯಗಳ ಸೋಲಿನ ಬಳಿಕ ಕೆಲ ಪಂದ್ಯ ಗೆದ್ದು ಅಭಿಮಾನಿಗಳಲ್ಲಿ ಪ್ಲೇ ಆಫ್ ಕನಸು ಕಾಣಿಸಿದ್ದ ಆರ್ಸಿಬಿ ತಂಡ ಇದೀಗ ಡೆಲ್ಲಿ ವಿರುದ್ದ ಸೋಲುವ ಮೂಲಕ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟಿದ್ದು...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನವದೆಹಲಿ: ಸತತ ಆರು ಪಂದ್ಯಗಳ ಸೋಲಿನ ಬಳಿಕ ಕೆಲ ಪಂದ್ಯ ಗೆದ್ದು ಅಭಿಮಾನಿಗಳಲ್ಲಿ ಪ್ಲೇ ಆಫ್ ಕನಸು ಕಾಣಿಸಿದ್ದ ಆರ್ಸಿಬಿ ತಂಡ ಇದೀಗ ಡೆಲ್ಲಿ ವಿರುದ್ದ ಸೋಲುವ ಮೂಲಕ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟಿದ್ದು ಇದರ ಜೊತೆಗೆ ಕಳಪೆ ದಾಖಲೆಯೊಂದನ್ನು ಬರೆದಿದೆ.
ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ 16 ರನ್ ಗಳಿಂದ ಸೋಲು ಕಂಡಿದೆ. ಇನ್ನು ಗೆಲುವಿನ ನಗೆ ಬೀರಿದ ಡೆಲ್ಲಿ ಪ್ಲೇ ಆಫ್ ಗೆ ಲಗ್ಗೆ ಇಟ್ಟಿತು. ಇನ್ನು ನಿನ್ನೆಯ ಸೋಲಿನ ಮೂಲಕ ಆರ್ಸಿಬಿ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಒಟ್ಟಾರೆ ನೂರು ಪಂದ್ಯಗಳ ಸೋಲು ಕಂಡಿದೆ. 
ಟಿ20 ಮಾದರಿಯಲ್ಲಿ ಕ್ರಿಕೆಟ್ ನಲ್ಲಿ ನೂರು ಪಂದ್ಯ ಸೋತ ಮೂರನೇ ತಂಡ ಎನ್ನುವ ಕೆಟ್ಟ ಹಣೆಪಟ್ಟಿ ಪಡೆದುಕೊಂಡಿದೆ. ಇಂಗ್ಲೆಡ್ ನ ಮಿಡೆಲ್ ಸೆಕ್ಸ್ 112 ಪಂದ್ಯ, ಡರ್ಬಿ ಶೈರ್ 101 ಪಂದ್ಯಗಳನ್ನು ಸೋತಿದ್ದು ಇದೀಗ ಈ ಪಟ್ಟಿಗೆ ಆರ್ಸಿಬಿ ಸೇರ್ಪಡೆಯಾಗಿದೆ. 
2019ರ ಐಪಿಎಲ್ ನಲ್ಲಿ ಸತತ ಆರು ಪಂದ್ಯಗಳನ್ನು ಸೋಲುವ ಮೂಲಕ ಆರ್ಸಿಬಿ ತಂಡ 2013ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ದಾಖಲೆಯನ್ನು ಸರಿಗಟ್ಟಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com