ಆರ್‌ಸಿಬಿ ಪ್ಲೇ ಆಫ್ ಕನಸಿಗೆ ಕೊಳ್ಳಿ ಇಟ್ಟ ಆ ಒಂದು ಕ್ಯಾಚ್, ವಿಡಿಯೋ ವೈರಲ್!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕೆಲ ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ಹಂತದಲ್ಲಿ ಅಭಿಮಾನಿಗಳಲ್ಲಿ ಆರ್‌ಸಿಬಿ ಪ್ಲೇ ಆಫ್ ಕನಸು ಚಿಗುರಿತ್ತು.

Published: 30th April 2019 12:00 PM  |   Last Updated: 30th April 2019 12:17 PM   |  A+A-


Axar Patel, AB De Villiers

ಅಕ್ಷರ್ ಪಟೇಲ್, ಎಬಿ ಡಿವಿಲಿಯರ್ಸ್

Posted By : VS VS
Source : Online Desk
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಕೆಲ ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ಹಂತದಲ್ಲಿ ಅಭಿಮಾನಿಗಳಲ್ಲಿ ಆರ್‌ಸಿಬಿ ಪ್ಲೇ ಆಫ್ ಕನಸು ಚಿಗುರಿತ್ತು. ಆದರೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಹಿಡಿದ ಆ ಒಂದು ಕ್ಯಾಚ್ ಆರ್‌ಸಿಬಿ ಪ್ಲೇ ಆಫ್ ಕನಸನ್ನೇ ಭಗ್ನಗೊಳಿಸಿತು.

ದೆಹಲಿಯ ಫಿರೋಜ್ ಶಾ ಕೋಟ್ಲಾ ನಡೆದ ಪಂದ್ಯದಲ್ಲಿ ಆರ್‌ಸಿಬಿ 16 ರನ್ ಗಳಿಂದ ಸೋಲು ಕಂಡಿತ್ತು. ಆ ಮೂಲಕ ಆರ್‌ಸಿಬಿ ಪ್ಲೇ ಆಫ್ ಕನಸು ಭಗ್ನಗೊಂಡಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟಾಗಿದ್ದ ಬಳಿಕ ಜಾಣ್ಮೆಯ ಆಟವಾಡುತ್ತಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಸಿಡಿಸಿದ ಚೆಂಡನ್ನು ಅಕ್ಷರ್ ಪಟೇಲ್ ಬೌಂಡರಿ ಗೆರೆಯಲ್ಲಿ ಅದ್ಭುತ ಕ್ಯಾಚ್ ಹಿಡಿದಿದ್ದರು. ಇದು ಆರ್‌ಸಿಬಿಯ ಜಂಗಾಬಲವನ್ನೇ ಕುಗ್ಗಿಸಿತ್ತು. ಅಂತೆ ನಂತರ ಬಂದ ಬ್ಯಾಟ್ಸ್ ಮನ್ ಗಳು ಸಹ ಉತ್ತಮ ಆಟವಾಡದ ಕಾರಣ ತಂಡ 16 ರನ್ ಗಳಿಂದ ಸೋಲು ಕಂಡಿತ್ತು.

ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನು ಆಡಿರುವ ಆರ್ಸಿಬಿ 4 ಪಂದ್ಯಗಳನ್ನು ಗೆದ್ದು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp