ಕ್ರಿಕೆಟ್ ನ ಗಂಧಗಾಳಿಯೇ ಇಲ್ಲದ ಈ ವ್ಯಕ್ತಿ ವಿರಾಟ್ ಕೊಹ್ಲಿಗೆ ಸ್ಪೂರ್ತಿಯಂತೆ!

ವಿರಾಟ್ ಕೊಹ್ಲಿ ಯಾವ ಕ್ರೀಡಾಪಟುವಿಗೆ ತಾನೆ ಮಾದರಿ, ಸ್ಪೂರ್ತಿಯಾಗಲಾರರು? ಅಂತಹ ಕ್ರಿಕೆಟ್ ಐಕಾನ್ ಗೂ ಸಹ ಓರ್ವ ವ್ಯಕ್ತಿ ಸ್ಪೂರ್ತಿಯಾಗಿದ್ದಾರಂತೆ.

Published: 02nd August 2019 12:00 PM  |   Last Updated: 02nd August 2019 03:31 AM   |  A+A-


Cristiano Ronaldo inspires everyone, he is on another level: Virat Kohli

ಕ್ರಿಕೆಟ್ ನ ಗಂಧಗಾಳಿಯೇ ಇಲ್ಲದ ಈ ವ್ಯಕ್ತಿ ವಿರಾಟ್ ಕೊಹ್ಲಿಗೆ ಸ್ಪೂರ್ತಿಯಂತೆ!

Posted By : SBV SBV
Source : The New Indian Express
ವಿರಾಟ್ ಕೊಹ್ಲಿ ಯಾವ ಕ್ರೀಡಾಪಟುವಿಗೆ ತಾನೆ ಮಾದರಿ, ಸ್ಪೂರ್ತಿಯಾಗಲಾರರು? ಅಂತಹ ಕ್ರಿಕೆಟ್ ಐಕಾನ್ ಗೂ ಸಹ ಓರ್ವ ವ್ಯಕ್ತಿ ಸ್ಪೂರ್ತಿಯಾಗಿದ್ದಾರಂತೆ. ಆದರೆ ಸ್ಪೂರ್ತಿದಾಯಕ ವ್ಯಕ್ತಿಗೂ ಕ್ರಿಕೆಟ್ ಗೂ ಯಾವ ಸಂಬಂಧವೂ ಇಲ್ಲ, ಅಸಲಿಗೆ ಆ ವ್ಯಕ್ತಿಗೆ ಕ್ರಿಕೆಟ್ ನ ಗಂಧಗಾಳಿಯೇ ಇಲ್ಲ! 

ಅಚ್ಚರಿಯಾಗಿರಬೇಕು ಅಲ್ವಾ? ಹೌದು, ಸ್ವತಃ ವಿರಾಟ್ ಕೊಹ್ಲಿ ತಮಗಷ್ಟೇ ಅಲ್ಲದೇ ಬಹುಮಂದಿ ಕ್ರೀಡಾಪಟುಗಳಿಗೆ ಯಾರು ಸ್ಪೂರ್ತಿ ಎಂಬುದನ್ನು ಬಹಿರಂಗಪಡಿಸಿದ್ದಾರೆ. 

ಆ ವ್ಯಕ್ತಿಗೂ ಕ್ರಿಕೆಟ್ ಗೂ ಸಂಬಂಧವಿಲ್ಲದೇ ಇರಬಹುದು ಆದರೆ ಕೊಹ್ಲಿ ಹೇಳಿರುವ ಆ ಸ್ಪೂರ್ತಿದಾಯಕ ವ್ಯಕ್ತಿ ಓರ್ವ ಕ್ರೀಡಾಪಟು, ಫುಟ್ ಬಾಲ್ ಜಗತ್ತಿನ ದಂತಕಥೆ ಕ್ರಿಸ್ಚಿಯಾನೋ ರೊನಾಲ್ಡೋ. 

ವಿರಾಟ್ ಕೊಹ್ಲಿ ಕ್ರಿಕೆಟ್ ನ ಹೊರತಾಗಿ ತಾವು ಇಷ್ಟಪಡುವ, ಪರಿಣಿತಿ ಸಾಧಿಸಿರುವ ಕ್ಷೇತ್ರವೆಂದರೆ ಅದು ಫುಟ್ ಬಾಲ್.  ಫೀಫಾ.ಕಾಮ್ ಗೆ ನೀಡಿರುವ ಸಂದರ್ಶನದಲ್ಲಿ ವಿರಾಟ್ ಕೋಹ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದು, ತಮಗಷ್ಟೇ ಅಲ್ಲದೇ ಹಲವರಿಗೆ ರೊನಾಲ್ಡೋ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ. 

ರೊನಾಲ್ಡೋ ಎಲ್ಲರಿಗಿಂತ ಎತ್ತರದ ಸ್ಥಾನದಲ್ಲಿದ್ದಾರೆ. ಅವರ ಬದ್ಧತೆ ಸಾಟಿಯಿಲ್ಲದ್ದು ಎಂದು ಕೊಹ್ಲಿ ಬಣ್ಣಿಸಿದ್ದಾರೆ. ರೊನಾಲ್ಡೋ ಹೆಚ್ಚು ಸವಾಲುಗಳನ್ನು ಸ್ವೀಕರಿಸಿದ್ದಾರೆ. ಅವರು ಪರಿಪೂರ್ಣ ಕ್ರೀಡಾಪಟು ಎಂದು ಕೊಹ್ಲಿ ಹೇಳಿದ್ದಾರೆ. 
Stay up to date on all the latest ಕ್ರಿಕೆಟ್ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp