ಭಾರತ ವೆಸ್ಟ್ ಇಂಡೀಸ್ ಪ್ರವಾಸ: ವೇಳಾಪಟ್ಟಿ, ತಂಡದ ಬಗ್ಗೆ ಸಂಪೂರ್ಣ ಮಾಹಿತಿ

ವಿಶ್ವಕಪ್ ಟೂರ್ನಿ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ನಾಳೆ ಪ್ಲೋರಿಡಾದ ಟರ್ಪ್ ಮೈದಾನದಲ್ಲಿ ಕೆರಿಬಿಯನ್ನರ ವಿರುದ್ಧ ಮೊದಲ ಟಿ-20 ಪಂದ್ಯ ಆಡಲಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
ನವದೆಹಲಿ: ವಿಶ್ವಕಪ್ ಟೂರ್ನಿ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ ನಾಳೆ ಪ್ಲೋರಿಡಾದ ಟರ್ಪ್ ಮೈದಾನದಲ್ಲಿ ಕೆರಿಬಿಯನ್ನರ ವಿರುದ್ಧ ಮೊದಲ  ಟಿ-20 ಪಂದ್ಯ ಆಡಲಿದೆ.
ವಿಶ್ವಕಪ್ ಟೂರ್ನಿ ವೇಳೆಯಲ್ಲಿ ಗಾಯಗೊಂಡಿದ್ದ ಆರಂಭಿಕ ಆಟಗಾರ ಶಿಖರ್ ಧವನ್ ಭಾನುವಾರವೇ ಸೀಮಿತ ಓವರ್ ಗಳ ತಂಡಕ್ಕೆ ಮರಳಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಎರಡು ತಿಂಗಳ ಕಾಲ ರಜೆ ಹಿನ್ನೆಲೆಯಲ್ಲಿ ರಿಷಬ್ ಪಂಥ್, ವೆಸ್ಟ್ ಇಂಡೀಸ್ ವಿರುದ್ಧದ ಮೂರು ಮಾದರಿಯ ಸರಣಿಯಲ್ಲೂ ಪಾಲ್ಗೊಳ್ಳಲಿದ್ದಾರೆ.
ಕೊಹ್ಲಿ  ನಾಯಕತ್ವದ ತಂಡದಲ್ಲಿ ಹೊಸ ಆಟಗಾರ ರಾಹುಲ್ ಚಾಹರ್  ವೀಂಡಿಸ್ ವಿರುದ್ಧದ ಎಲ್ಲಾ ಮಾದರಿಯ ಪಂದ್ಯಗಳಲ್ಲೂ ಆಡಲಿದ್ದಾರೆ. ಈ ಮಧ್ಯೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಶ್ರೇಯಸ್ಸು ಅಯ್ಯರ್ ಹಾಗೂ ಮನೀಷ್ ಪಾಂಡೆ ಏಕದಿನ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಭರವಸೆಯ ಆಟಗಾರ ಶುಭಮನ್ ಗಿಲ್  ವೀಂಡಿಸ್ ಪ್ರವಾಸಕ್ಕೆ ಪರಿಗಣಿಸಿಲ್ಲ. 
ಭಾರತ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ ಇಂತಿದೆ
(ಆಗಸ್ಟ್ 3 ) 1ನೇ ಟಿ-20 ಪಂದ್ಯ:ಪ್ಲೋರಿಡಾದ ಟರ್ಪ್ ಮೈದಾನ:  ಸ್ಥಳೀಯ ಕಾಲಮಾನ  (ಬೆಳಗ್ಗೆ 10-30)
(ಆಗಸ್ಟ್ 4)  2ನೇ ಟಿ- 20 ಪಂದ್ಯ:  ಪ್ಲೋರಿಡಾದ ಟರ್ಪ್ ಮೈದಾನ :ಸ್ಥಳೀಯ ಕಾಲಮಾನ  (ಬೆಳಗ್ಗೆ 10-30)
(ಆಗಸ್ಟ್ 6)  3ನೇ ಟಿ-20 ಪಂದ್ಯ : ಪ್ಲೋರಿಡಾದ ಟರ್ಪ್ ಮೈದಾನ : ಸ್ಥಳೀಯ ಕಾಲಮಾನ   (ಬೆಳಗ್ಗೆ 10-30)             
(ಆಗಸ್ಟ್ 8)  1ನೇ ಏಕದಿನ ಪಂದ್ಯ: ಗಯಾನಾದ ಪ್ರಾವಿಡೆನ್ಸಿ ಮೈದಾನ : ಸ್ಥಳೀಯ ಕಾಲಮಾನ(  ಬೆಳಗ್ಗೆ 9-30)
(ಆಗಸ್ಟ್ 11)  2ನೇ ಏಕದಿನ  ಪಂದ್ಯ : ಟ್ರಿನಿಡಾಡ್ ಕ್ವಿನ್ಸ್ ಪಾರ್ಕ್:ಸ್ಥಳೀಯ ಕಾಲಮಾನ (ಬೆಳಗ್ಗೆ 9-30)
(ಆಗಸ್ಟ್ 14)  3ನೇ ಏಕದಿನ ಪಂದ್ಯ:  ಟ್ರಿನಿಡಾಡ್ ಓವೆಲ್ ಮೈದಾನ: ಸ್ಥಳೀಯ ಕಾಲಮಾನ (ಬೆಳಗ್ಗೆ 9-30)
(ಆಗಸ್ಚ್ 22ರಿಂದ 26ವರಗೆ) 1ನೇ  ಟೆಸ್ಟ್  ಪಂದ್ಯ: ಆಂಟಿಗುವಾ ರಿಚರ್ಡ ಮೈದಾನ ( ಬೆಳಗ್ಗೆ 9-30)
(ಆಗಸ್ಟ್ 30ರಿಂದ ಸೆಪ್ಚೆಂಬರ್ 03) 2ನೇ ಟೆಸ್ಟ್ ಪಂದ್ಯ: ಜಮೈಕಾದ ಸಬೀನಾಪಾರ್ಕ್: ( ಬೆಳಗ್ಗೆ -9-30)
ಏಕದಿನ ಪಂದ್ಯಗಳಿಗೆ ಟೀ ಇಂಡಿಯಾ ಇಂತಿದೆ:  ವಿರಾಟ್ ಕೊಹ್ಲಿ ( ನಾಯಕ) ರೋಹಿತ್ ಶರ್ಮಾ , ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ಸು ಅಯ್ಯರ್, ಮನೀಷ್ ಪಾಂಡೆ, ರಿಷಬ್ ಪಂಥ್ ( ವಿಕೆಟ್ ಕೀಪರ್ )  ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಯಜುರ್ವೇಂದ್ರ ಚಾಹಲ್, ಕೇದಾರ್ ಜಾದವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, 
ಖಲೀಲ್ ಅಹ್ಮದ್ , ನವದೀಪ್ ಸೈನಿ
ಟಿ-20 ಪಂದ್ಯಗಳಿಗೆ ಭಾರತ ತಂಡ:  ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಬ್ ಪಂಥ್ , ಕೃನಾಲ್ ಪಾಂಡೆ, ರವಿಂದ್ರ ಜಡೇಡಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಾಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್, ದೀಪಕ್  ಚಾಹರ್, ನವದೀಪ್ ಸೈನಿ
ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ: ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಮಾಯಾಂಕ್ ಅಗರ್ ವಾಲ್,ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಬ್ ಪಂಥ್, ವೃದ್ದಿಮನ್ ಶಾಹ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ಉಮೇಶ್ ಯಾದವ್  ಇದ್ದಾರೆ.                     

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com