ಟೀಂ ಇಂಡಿಯಾ ಪ್ರಧಾನ ಕೋಚ್ ಆಯ್ಕೆ ಕಷ್ಟವೇನಲ್ಲ: ಕಪಿಲ್ ದೇವ್

ಟೀಮ್‌ ಇಂಡಿಯಾ ಪ್ರಧಾನ ಕೋಚ್ ಆಯ್ಕೆ ಕಷ್ಟವೇನಲ್ಲ ಎಂದು ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: ಟೀಮ್‌ ಇಂಡಿಯಾ ಪ್ರಧಾನ ಕೋಚ್ ಆಯ್ಕೆ ಕಷ್ಟವೇನಲ್ಲ ಎಂದು ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಹೇಳಿದ್ದಾರೆ.
ಐಸಿಸಿ ವಿಶ್ವಕಪ್ ಟೂರ್ನಿ ಅಂತ್ಯದೊಂದಿಗೆ ಹಾಲಿ ಕೋಚ್ ರವಿಶಾಸ್ತ್ರಿ ಅವರ ಒಪ್ಪಂದದ ಅವಧಿ ಕೂಡ ಮುಕ್ತಾಯವಾಗಿದ್ದು, ಈಗಾಗಲೇ ಬಿಸಿಸಿಐ ಕೋಚ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹಾಲಿ ಕೋಚ್ ರವಿಶಾಸ್ತ್ರಿ, ವಿರೇಂದ್ರ ಸೆಹ್ವಾಗ್, ಮಾಜಿ ಟೀಂ ಇಂಡಿಯಾ ಕೋಚ್ ಗ್ಯಾರಿ ಕರ್ಸ್ಟರ್ನ್, ಮಹೇಲಾ ಜಯವರ್ಧನೆ, ಟಾಮ್ ಮೂಡಿ ಸೇರಿದಂತೆ ಘಟಾನುಘಟಿ ಕ್ರಿಕೆಟಿಗರು ಕೋಚ್ ಹುದ್ದೆಯ ರೇಸ್ ನಲ್ಲಿದ್ದಾರೆ.  ಇಂತಹ ಘಾಟಾನುಘಟಿ ಆಟಗಾರರ ನಡುವೆಯೂ ಟೀಂ ಇಂಡಿಯಾ ಪ್ರಧಾನ ಕೋಚ್ ಆಯ್ಕೆ ಕಷ್ಟವೇನಲ್ಲ ಎಂದು ಹೇಳುವ ಮೂಲಕ ಕ್ರಿಕೆಟ್ ಸಲಹಾ ಸಮಿತಿ ಅಧ್ಯಕ್ಷ ಕಪಿಲ್ ದೇವ್ ಅಚ್ಚರಿ ಮೂಡಿಸಿದ್ದಾರೆ.
ಕೋಚ್ ಆಯ್ಕೆ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ಇದು ಕಠಿಣವಲ್ಲ. ನಿಮ್ಮ ಕೆಲಸವನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ಮಾಡುತ್ತೀರಿ. ನಿಮ್ಮ ಜವಾಬ್ದಾರಿಗಳನ್ನು ನೀವು ಪೂರೈಸದಿದ್ದಾಗ ಮಾತ್ರ ಅದು ಕಠಿಣವಾಗುತ್ತದೆ' ಎಂದು ಹೇಳಿದ್ದಾರೆ. ಪೂರ್ವ ಬಂಗಾಳ ಕ್ಲಬ್‌ ನ ಶತಮಾನೋತ್ಸವದ ಸಂದರ್ಭದಲ್ಲಿ 'ಭಾರತ್ ಗೌರವ್' ಪ್ರಶಸ್ತಿಯನ್ನು ಸ್ವೀಕರಿಸಲು ಕಪಿಲ್ ದೇವ್ ಬಂದಿದ್ದರು. 
ಈ ವೇಳೆ ನಾಯಕ ವಿರಾಟ್ ಕೊಹ್ಲಿ ಅವರು ಹಾಲಿ ಮುಖ್ಯ ಕೋಚ್ ರವಿಶಾಸ್ತ್ರಿ ಅವರನ್ನು ಮತ್ತೊಂದು ಅವಧಿಗೆ ಬಹಿರಂಗವಾಗಿ ಬೆಂಬಲಿಸಿದ್ದಾರೆ ಎಂಬ ಅಂಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಕಪಿಲ್ ದೇವ್‌ ನಿರಾಕರಿಸಿದರು. ರವಿಶಾಸ್ತ್ರಿ ಅವರು ಮುಂದಿನ ಕೋಚ್‌ ಆಗಿ ಮುಂದುವರಿಯಲಿ ಎನ್ನುವುದು ನಾಯಕ ವಿರಾಟ್‌ ಅಭಿಪ್ರಾಯವದು. ಅದು ನನ್ನದಲ್ಲ. ಎಲ್ಲರಿಗೂ ಅವರದೇ ಆದ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರವಿದೆ. ಹಾಗಾಗಿ, ಇದರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ ಎಂದು ಹೇಳಿದರು.
ಇನ್ನು  ಭಾರತ ತಂಡದ ಮುಖ್ಯ ತರಬೇತದಾರ ನೇಮಕ ಮಾಡುವ ಪ್ರಯತ್ನದಲ್ಲಿರುವ ಕಪಿಲ್ ದೇವ್, ಅಂಶುಮಾನ್‌ ಗಾಯಕ್ವಾಡ್‌ ಮತ್ತು ಶಾಂತ ರಂಗಸ್ವಾಮಿ ಅವರನ್ನೊಳಗೊಂಡ ಕೋಚ್ ಹುದ್ದೆಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲನೆಯಲ್ಲಿ ತಲ್ಲೀನರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com