ಏನೋ ಮಾಡಲು ಹೋಗಿ; ಸಂಭ್ರಮಾಚರಣೆ ವೇಳೆ ಬೈಕ್​ ಸ್ಕಿಡ್​ ಆಗಿ ಕೆಳಗೆ ಬಿದ್ದ ಶ್ರೀಲಂಕಾ ಕ್ರಿಕೆಟಿಗರು

ಸರಣಿ ಗೆದ್ದ ಬಳಿಕ ಧೋನಿ ಮತ್ತು ಅವರ ತಂಡ ಈ ಹಿಂದೆ ಮೈದಾನದಲ್ಲೇ ಬೈಕ್ ಓಡಿಸಿ ಸಂಭ್ರಮಿಸಿದ್ದು ನೆನಪಿದೆ ಅಲ್ವೇ.. ಆದರೆ ಇಂತಹುದೇ ಸಂಭ್ರಮ ಮಾಡಲು ಹೋಗಿ ಶ್ರೀಲಂಕಾದ ಕ್ರಿಕೆಟಿಗ ಎಡವಟ್ಟು ಮಾಡಿಕೊಂಡಿದ್ದಾರೆ.

Published: 02nd August 2019 12:00 PM  |   Last Updated: 02nd August 2019 08:42 AM   |  A+A-


Sri Lankan Cricketer Kusal Mendis falls miserably as bike skids off during post-match celebration

ಸಂಗ್ರಹ ಚಿತ್ರ

Posted By : SVN SVN
Source : Online Desk
ಕೊಲಂಬೋ: ಸರಣಿ ಗೆದ್ದ ಬಳಿಕ ಧೋನಿ ಮತ್ತು ಅವರ ತಂಡ ಈ ಹಿಂದೆ ಮೈದಾನದಲ್ಲೇ ಬೈಕ್ ಓಡಿಸಿ ಸಂಭ್ರಮಿಸಿದ್ದು ನೆನಪಿದೆ ಅಲ್ವೇ.. ಆದರೆ ಇಂತಹುದೇ ಸಂಭ್ರಮ ಮಾಡಲು ಹೋಗಿ ಶ್ರೀಲಂಕಾದ ಕ್ರಿಕೆಟಿಗ ಎಡವಟ್ಟು ಮಾಡಿಕೊಂಡಿದ್ದಾರೆ.

ಕೊಲಂಬೋದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ಬುಧವಾರ ಘಟನೆ ನಡೆದ ಬಾಂಗ್ಲಾದೇಶದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 122 ರನ್ ಗಳ ಅಂತರದಲ್ಲಿ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡಿತ್ತು. ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ತಂಡ 3-0 ಇಂದ ಏಕದಿನ ಸರಣಿಯನ್ನು ಗೆದ್ದಿತ್ತು. ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. 

ಸರಣಿ ಗೆಲುವಿನ ಸಂಭ್ರಮದಲ್ಲಿದ್ದ ಲಂಕಾದ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ಸಿಕ್ಕ ಬೈಕ್ ಅನ್ನು ಲಂಕಾದ ಆಟಗಾರ ಕುಶಾಲ್ ಮೆಂಡಿಸ್ ಮೈದಾನದಲ್ಲೇ ಬೈಕ್ ಚಾಲನೆ ಮಾಡಿದರು.  ಈ ವೇಳೆ ಮೈದಾನದೊಳಗೆ ಬೈಕ್​ ಸ್ಕಿಡ್​ ಆಗಿದೆ. ಮೈದಾನದ ಹುಲ್ಲು ಹಾಸಿನ ಮೇಲೆ ತೇವಾಂಶವಿದ್ದ ಕಾರಣ ಬೈಕ್ ಜಾರಿ ಬಿದ್ದಿದೆ. ಅಂತೆಯೇ ಬೈಕ್ ಚಾಲನೆ ಮಾಡುತ್ತಿದ್ದ ಕುಶಾಲ್ ಮೆಂಡಿಸ್ ಮತ್ತು ಹಿಂಬದಿಯಲ್ಲಿದ್ದ ಮತ್ತೋರ್ವ ಆಟಗಾರ ಕೂಡ ಕೆಳಗೆ ಬಿದ್ದಿದ್ದಾರೆ. ಕೂಡಲೇ ತಕ್ಷಣ ಸ್ಥಳದಲ್ಲಿದ್ದ ಕ್ರೀಡಾಂಗಣದ ಸಿಬ್ಬಂದಿ ಮೆಂಡಿಸ್​ ನೆರವಿಗೆ ಧಾವಿಸಿದ್ದಾರೆ. ಅದೃಷ್ಟವಶಾತ್ ಅಪಘಾತದಲ್ಲಿ ಮೆಂಡಿಸ್​ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ವಿಶ್ವಕಪ್​ನಲ್ಲಿ ಕಳಪೆ ನಿರ್ವಹಣೆ ತೋರಿದ್ದ ಶ್ರೀಲಂಕಾ ತಂಡ ತವರಿನಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆದ ಸರಣಿಯಲ್ಲಿ ಅತ್ಯುತ್ತಮ ನಿರ್ವಹಣೆ ತೋರುವ ಮೂಲಕ ಸರಣಿ ಜಯ ದಾಖಲಿಸಿದೆ. ಶ್ರೀಲಂಕಾದ ಹಿರಿಯ ಕ್ರಿಕೆಟಿಗ ಲಸಿತ್​ ಮಾಲಿಂಗಾ ಬಾಂಗ್ಲಾ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತರ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. 
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp