ಮೊದಲನೇ ಟಿ20: ಟೀಂ ಇಂಡಿಯಾ ಬೌಲಿಂಗ್ ಗೆ ತತ್ತರಿಸಿದ ವಿಂಡೀಸ್, ಗೆಲುವಿಗೆ 96 ರನ್ ಗುರಿ

ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲನೇ ಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗಿಗಿಳಿದಿದ್ದ ವಿಂಡೀಸ್ ಪಡೆ ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದೆ.
ಮೊದಲನೇ ಟಿ20: ಟೀಂ ಇಂಡಿಯಾ ಬೌಲಿಂಗ್ ಗೆ ತತ್ತರಿಸಿದ ವಿಂಡೀಸ್, ಗೆಲುವಿಗೆ 96 ರನ್ ಗುರಿ
ಮೊದಲನೇ ಟಿ20: ಟೀಂ ಇಂಡಿಯಾ ಬೌಲಿಂಗ್ ಗೆ ತತ್ತರಿಸಿದ ವಿಂಡೀಸ್, ಗೆಲುವಿಗೆ 96 ರನ್ ಗುರಿ

ಫ್ಲೋರಿಡಾ: ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲನೇ ಟಿ-20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗಿಗಿಳಿದಿದ್ದ ವಿಂಡೀಸ್ ಪಡೆ ಟೀಂ ಇಂಡಿಯಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದೆ. ನಿಗದಿತ ಇಪ್ಪತ್ತು ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ವಿಂಡೀಸ್ 95 ರನ್ ಗಳಿಸಲಷ್ಟೇ ಸಾಧ್ಯವಾಗಿದೆ. ಈ ಮೂಲಕ ಭಾರತದ ಗೆಲುವಿಗೆ 96 ರನ್ ಗಳ ಅಲ್ಪ ಗುರಿ ನೀಡಿದೆ

ವೆಸ್ಟ್ ಇಂಡೀಸ್ ತಂಡದ ಆರಂಭಿಕರಾಗಿದ್ದ ಜಾನ್ ಕ್ಯಾಂಪ್‌ಬೆಲ್ ಹಾಗೂ ಎವಿನ್ ಲೆವಿಸ್ ಶೂನ್ಯ ಸಂಪಾದಿಸಿದ್ದರೆ ನಿಕೋಲಸ್ ಪೂರನ್ (20) ಶಿಮ್ರಾನ್ ಹೆಟ್ಮಾಯೆರ್‌ (0) ಔಟಾದರೆ ತಂಡದ ಹಿರಿಯ ಅನುಭವಿ ಆಟಗಾರ ಕೀರಾನ್ ಪೊಲಾರ್ಡ್ 49 ಬಾಲ್ ಗಳಿಗೆ ನಾಲ್ಕು ಸಿಕ್ಸರ್ ಗಳ ಸಹಾಯದಿಂದ 49 ರನ್ ಗಳಿಸಿದ್ದರು. 

ಆದರೆ ತಂಡದ ನಾಯಕ ಬ್ರಾತ್‌ವೇಟ್ ಕೂಡ ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲದೆ ಹಿಂತಿರುಗಿದ್ದು ತಂಡಕ್ಕೆ ತೀವ್ರ ಹಿನ್ನಡೆಯಾಗಿತ್ತು.ಇನ್ನು  ಸುನಿಲ್ ನರೈನ್ (2) ಹಾಗೂ ಕೀಮೊ ಪೌಲ್ (3)ರನ್ ಗಳಿಸಿದ್ದರು.

ಟೀಂ ಇಂಡ್ಯಾ ಪರವಾಗಿ ನವದೀಪ್ ಸೈನಿ 3, ಭುವನೇಶ್ವರ್ ಕುಮಾರ್ 2, ವಾಷಿಂಗ್ಟನ್ ಸುಂದರ್, ಖಲೀಲ್ ಅಹ್ಮದ್, ಕೃುಣಾಲ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ  ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com