2ನೇ ಟಿ20 ಪಂದ್ಯ: ವಿಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

Published: 04th August 2019 12:00 PM  |   Last Updated: 04th August 2019 08:08 AM   |  A+A-


2nd T201: Unchanged India opt to bat against West indies

ಟಾಸ್ ಗೆದ್ದ ಕೊಹ್ಲಿ

Posted By : SVN SVN
Source : Online Desk
ಫ್ಲೋರಿಡಾ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಫ್ಲೋರಿಡಾದ ಲಾಡೇರ್ ಹಿಲ್ ನ ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಕ್ರೀಡಾಂಗಣ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು 2ನೇ ಪಂದ್ಯದಲ್ಲಿ ಕೊಹ್ಲಿ ಯಾವುದೇ ಬದಲಾವಣೆಗೆ ಮುಂದಾಗಿಲ್ಲ. ಮೊದಲ ಪಂದ್ಯದಲ್ಲಿ ಆಡಿದ್ದ ಆಟಗಾರರನ್ನೇ 2ನೇ ಪಂದ್ಯಕ್ಕೂ ಉಳಿಸಿಕೊಂಡಿದ್ದಾರೆ.

ಇನ್ನು ವಿಂಡೀಸ್ ನಾಯಕ ಕಾರ್ಲೋಸ್ ಬ್ರಾಥ್ ವೇಟ್ ತಮ್ಮ ತಂಡದಲ್ಲಿ 1 ಬದಲಾವಣೆ ಮಾಡಿದ್ದು, ಜಾನ್ ಕಾಂಬೆಲ್ ಬದಲಿಗೆ ಪಿಯರೆ ತಂಡ ಸೇರಿಕೊಂಡಿದ್ದಾರೆ. ಸುನಿಲ್ ನರೇನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ತಂಡ ಇಂತಿದೆ. 
ವೆಸ್ಟ್ ಇಂಡೀಸ್: ಎವಿನ್ ಲೂಯಿಸ್, ಸುನಿಲ್ ನರೈನ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಕೀರನ್ ಪೊಲಾರ್ಡ್, ಶಿಮ್ರಾನ್ ಹೆಟ್ಮಿಯರ್, ರೋವ್ಮನ್ ಪೊವೆಲ್, ಕಾರ್ಲೋಸ್ ಬ್ರಾಥ್‌ವೈಟ್ (ನಾಯಕ), ಕೀಮೋ ಪಾಲ್, ಖಾರಿ ಪಿಯರೆ, ಶೆಲ್ಡನ್ ಕಾಟ್ರೆಲ್, ಓಶೇನ್ ಥಾಮಸ್

ಭಾರತ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಮನೀಶ್ ಪಾಂಡೆ, ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ನವದೀಪ್ ಸೈನಿ, ಖಲೀಲ್ ಅಹ್ಮದ್
Stay up to date on all the latest ಕ್ರಿಕೆಟ್ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp