ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ದ. ಆಫ್ರಿಕಾ ವೇಗಿ ಸ್ಟೇಯ್ನ್

ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿರುವ ವೇಗದ ಬೌಲರ್ ಡೇಲ್ ಸ್ಟೇಯ್ನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಸೋಮವಾರ ವಿದಾಯ ಘೋಷಿಸಿದ್ದಾರೆ.
ಡೇಲ್ ಸ್ಟೇಯ್ನ್
ಡೇಲ್ ಸ್ಟೇಯ್ನ್
ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿರುವ ವೇಗದ ಬೌಲರ್ ಡೇಲ್ ಸ್ಟೇಯ್ನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಸೋಮವಾರ ವಿದಾಯ ಘೋಷಿಸಿದ್ದಾರೆ.
ಕಳೆದ 15 ವರ್ಷಗಳ ಕ್ರಿಕೆಟ್ ವೃತ್ತಿ ಜೀವನದಲ್ಲಿ 93 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಟೇಯ್ನ್ 439 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಒಟ್ಟಾರೆ ಟೆಸ್ಟ್ ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಎಂಟನೇ ಹಾಗೂ ವೇಗಿಗಳ ಪಟ್ಟಿಯಲ್ಲಿ ಸ್ಟೇಯ್ನ್ ಐದನೇ ಸ್ಥಾನದಲ್ಲಿದ್ದಾರೆ.
ಇವರಿಗಿಂತ ಹೆಚ್ಚಿನ ವಿಕೆಟ್ ಸಾಧನೆಯನ್ನು ಜೇಮ್ಸ್ ಆಂಡರ್ಸನ್ (575), ಗ್ಲೇನ್ ಮೆಗ್ರಾತ್ (563), ಕರ್ಟನಿ ವಾಲ್ಶ್ (519), ಸ್ಟುವರ್ಟ್ ಬ್ರಾಡ್ (450) ಸ್ಟೇಯ್ನ್ ಅವರಿಗಿಂತ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ವೇಗಿಗಳಾಗಿದ್ದಾರೆ. 36 ವರ್ಷ ಪ್ರಾಯದ ಸ್ಟೇಯ್ನ್ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ದೇಶದ ಪರ ಆಡಲಿದ್ದಾರೆ.
"ನಾನು ಇನ್ನೊಂದು ಟೆಸ್ಟ್ ಪಂದ್ಯವಾಡುವುದಿಲ್ಲ ಎಂದು ಯೋಚಿಸಲು ಬಹಳ ಕಷ್ಟವೆನಿಸುತ್ತದೆ.ವೃತ್ತಿ ಜೀವನದ ಉಳಿದ ದಿನಗಳಲ್ಲಿ ಏಕದಿನ ಹಾಗೂ ಟಿ೨೦ ಪಂದ್ಯಗಳತ್ತ ಗರಿಷ್ಟ ಗಮನ ಹರಿಸುವೆ. ಈ ಕ್ರೀಡೆಯಲ್ಲಿ ಇನ್ನಷ್ಟು ದಿನ ಮುಂದುವರಿಯಲು ಯತ್ನಿಸುವೆ."
"ಟೆಸ್ಟ್ ಕ್ರಿಕೆಟ್ ಒಂದು ಉತ್ತಮ ಆವೃತ್ತಿಯಾಗಿದ್ದು ಇದು ನಿಮ್ಮನ್ನು ಮಾನಸಿಕ, ದೈಹಿಕ ಹಾಗೂ ಬಾವನಾತ್ಮಕವಾಗಿ ಪರೀಕ್ಷೆಗೆ ಒಡ್ಡುತ್ತದೆ" ಸ್ಟೇಯ್ನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com