ಟೀಂ ಇಂಡಿಯಾ ಬೌಲಿಂಗ್ ಕೋಚ್ ಹುದ್ದೆ ಪೈಪೋಟಿಯಲ್ಲಿ ಕನ್ನಡಿಗ ಸುನಿಲ್ ಜೋಶಿ

ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅರ್ಜಿ ಸಲ್ಲಿಸಿದ್ದಾರೆ.

Published: 06th August 2019 12:00 PM  |   Last Updated: 06th August 2019 06:50 AM   |  A+A-


Former spinner Sunil Joshi applies for position of Team India's bowling coach

ಸುನಿಲ್ ಜೋಶಿ

Posted By : LSB LSB
Source : UNI
ನವದೆಹಲಿ: ಭಾರತ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಹುದ್ದೆಗೆ ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅರ್ಜಿ ಸಲ್ಲಿಸಿದ್ದಾರೆ.

ಸುಮಾರು ಎರಡೂವರೆ ವರ್ಷಗಳ ಕಾಲ ಬಾಂಗ್ಲಾದೇಶದ ಬೌಲಿಂಗ್ ಕೋಚ್ ಆಗಿದ್ದ ಜೋಶಿ ಇದೀಗ ಭಾರತ ತಂಡದ ಬೌಲಿಂಗ್ ಕೋಚ್ ಆಗಲು ಪೈಪೋಟಿ ನಡೆಸಿದ್ದಾರೆ.

ಭಾರತ ತಂಡದ ಬೌಲಿಂಗ್ ಕೋಚ್ ವಿಷಯದಲ್ಲಿ "ಸ್ಪಿನ್ ಬೌಲಿಂಗ್" ನಲ್ಲಿ ಅನುಭವ ಹೊಂದಿದವರಿಗೆ ಆದ್ಯತೆಯಿದೆ ಎಂಬುದನ್ನು ಬಲವಾಗಿ ನಂಬಿರುವ ಸುನಿಲ್ ಜೋಶಿ ಅರ್ಜಿ ಸಲ್ಲಿಸಿದ್ದಾರೆ.

ಹೌದು.. ನಾನು ಟೀಂ ಇಂಡಿಯಾ ಬೌಲಿಂಗ್ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ನಾನು ಈಗಾಗಲೇ ಬಾಂಗ್ಲಾದೇಶದ ಬೌಲಿಂಗ್ ಕೋಚ್ ಆಗಿ ಸಮರ್ಥವಾಗಿ ನಿರ್ವಹಿಸಿದ್ದೇನೆ. ಮುಂದಿನ ಸವಾಲನ್ನು ನಿಭಾಯಿಸಲು ಸಿದ್ಧನಾಗಿದ್ದೇನೆ. ಭಾರತ ತಂಡಕ್ಕೆ ಸ್ಪೆಷಲಿಸ್ಟ್ ಸ್ಪಿನ್ ಕೋಚ್ ಅಗತ್ಯವಿಲ್ಲ ಎಂದು ನನಗೆ ತಿಳಿದಿದೆ. ಹಾಗಾಗಿ ಸ್ಪಿನ್ ಅನುಭವವುಳ್ಳ ತಮ್ಮನ್ನು ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಲಿದ್ದಾರೆ ಎಂಬ ಆಶಯವನ್ನು ಎಂದು ಸುನಿಲ್ ಜೋಶಿ ವ್ಯಕ್ತಪಡಿಸಿದ್ದಾರೆ.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp