ಅಂತಿಮ ಟಿ20: ಭಾರತಕ್ಕೆ ಏಳು ವಿಕೆಟ್ ಭರ್ಜರಿ ಜಯ, ಸರಣಿ ಕ್ಲೀನ್ ಸ್ವೀಪ್

ಮಂಗಳವಾರ ಭಾರತ-ವೆಸ್ಟ್ ಇಂಡೀಸ್ ನಡುವೆ ನಡೆದ ಮೂರನೇ ಹಗೂ ಅಂತಿಮ ಟಿ೨೦ ಪಂದ್ಯವನ್ನು ಭಾರತ ಏಳು ವಿಕೆಟ್ ಗಳಿಂದ ಗೆದ್ದಿದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಅಂತಿಮ ಟಿ20:: ಭಾರತಕ್ಕೆ ಏಳು ವಿಕೆಟ್ ಭರ್ಜರಿ ಜಯ, ಸರಣಿ ಕ್ಲೀನ್ ಸ್ವೀಪ್
ಅಂತಿಮ ಟಿ20:: ಭಾರತಕ್ಕೆ ಏಳು ವಿಕೆಟ್ ಭರ್ಜರಿ ಜಯ, ಸರಣಿ ಕ್ಲೀನ್ ಸ್ವೀಪ್
ಗಯಾನಮಂಗಳವಾರ ಭಾರತ-ವೆಸ್ಟ್ ಇಂಡೀಸ್ ನಡುವೆ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಭಾರತ ಏಳು ವಿಕೆಟ್ ಗಳಿಂದ ಗೆದ್ದಿದ್ದು ಸರಣಿಯನ್ನು 3-0 ನಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ವಿಂಡೀಸ್ ನೀಡಿದ್ದ ೧೪೭ ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (59)  ಹಾಗೂ  ರಿಷಬ್ ಪಂತ್ (65*) ಅವರ ಅದ್ಭುತ ಆಟದ ನ್ಬೆರವಿನಿಂದ 19.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತ್ತು.

ಆರಂಭಿಕರಾದ ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್‌ ಸಹ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. 

ಕೊಹ್ಲಿ 37 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ರೋಹಿಒತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ. ಇನ್ನೊಂದೆಡೆ ರಿಷಬ್ ಪಂತ್ ಸಹ 37 ಎಸೆತಗಳಲ್ಲಿ ಐವತ್ತು ರನ್ ಗಳಿಸಿ ಮಿಂಚಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com