ಶುಭಮನ್‌ ಗಿಲ್‌ ದ್ವಿಶತಕದ ಅಬ್ಬರ : ವೆಸ್ಟ್‌ ಇಂಡೀಸ್(ಎ) ಗೆ ಬೃಹತ್ ಗುರಿ

ಶುಭಮನ್‌ ಗಿಲ್‌ ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ದ್ವಿಶತಕ ಗಳಿಸಿದ ಪ್ರಥಮ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶುಭಮನ್‌ ಗಿಲ್‌
ಶುಭಮನ್‌ ಗಿಲ್‌
ಟ್ರಿನಿಡಾಡ್‌ :  ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ದ್ವಿಶತಕ ಗಳಿಸಿದ ಪ್ರಥಮ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಶುಭಮನ್‌ ಗಿಲ್‌  ಪಾತ್ರರಾಗಿದ್ದಾರೆ. 
ಶುಭಮನ್ ಗಿಲ್ ಅವರ ಅಬ್ಬರದ  204 ಹಾಗೂ  ಹನುಮ ವಿಹಾರಿ 118 ರನ್ ಗಳ  ನೆರವಿನಿಂದ ಭಾರತ(ಎ) ಮೂರನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್(ಎ) ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು.
ಇಲ್ಲಿನ ಬ್ರಿಯಾನ್‌ ಲಾರಾ ಕ್ರೀಡಾಂಗಣದಲ್ಲಿ ಮೂರು ವಿಕೆಟ್‌ ಕಳೆದುಕೊಂಡು 23 ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ ಭಾರತ(ಎ) 90 ಓವರ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು 365 ರನ್‌ ಗಳಿಸಿದ್ದು, ಆತಿಥೇಯರಿಗೆ 373 ರನ್‌ ಕಠಿಣ ಗುರಿ ನೀಡಿತು. 
ಬುಧವಾರ ಕೇವಲ 23 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಭಾರತ(ಎ)ಗೆ ಗುರುವಾರ ಬೆಳಗ್ಗೆ ಮತ್ತೊಂದು ವಿಕೆಟ್‌ ಉರುಳಿತು. ನೈಟ್‌ಮನ್‌ ಆಗಿ ಬಂದಿದ್ದ ಶಹಬಾಜ್ ನದೀಮ್‌ ಕೇವಲ 13 ರನ್‌ಗಳಿಗೆ ಸೀಮಿತರಾದರು.
 ಗಿಲ್‌-ವಿಹಾರಿ ಜುಗಲ್‌ಬಂದಿ
ನಂತರ ಜತೆಯಾದ ಶುಭಮನ್‌ ಗಿಲ್‌ ಹಾಗೂ ಹನುಮ ವಿಹಾರಿ ಜೋಡಿ ಅಮೋಘ ಬ್ಯಾಟಿಂಗ್‌ ಮಾಡುವಲ್ಲಿ ಸಫಲವಾಯಿತು. ಪ್ರಥಮ ಇನಿಂಗ್ಸ್‌ನಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಂಡ ಈ ಜೋಡಿ ವಿಂಡೀಸ್‌ ಬೌಲರ್‌ಗಳನ್ನು ಬಹಳ ಎಚ್ಚರಿಕೆಯಿಂದ ಎದುರಿಸಿತು. ಈ ಜೋಡಿಯು ಮುರಿಯದ ಐದನೇ ವಿಕೆಟ್‌ಗೆ 315 ರನ್‌ಗಳ ಜತೆಯಾಟವಾಡುವ ಮೂಲಕ ಭಾರತ(ಎ) ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ಯಶಸ್ವಿಯಾಯಿತು. 
ಒಂದು ತುದಿಯಲ್ಲಿ ಗಟ್ಟಿನಿಂತ ನಿಂತು ಬ್ಯಾಟಿಂಗ್‌ ಮಾಡಿದ ನಾಯಕ ಹನುಮ ವಿಹಾರಿ 219 ಎಸೆತಗಳಲ್ಲಿ ಒಂದು ಸಿಕ್ಸ್‌ ಹಾಗೂ 10 ಬೌಂಡರಿಯೊಂದಿಗೆ 118 ರನ್‌ ಗಳಿಸಿ ಶತಕ ಪೂರೈಸಿದರು.ಮತ್ತೊಂದು ತುದಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಶುಭಮನ್‌ ಗಿಲ್‌ ವೆಸ್ಟ್ ಇಂಡೀಸ್‌ ಬೌಲರ್‌ಗಳಿಗೆ ಬೆವರು ಇಳಿಸಿದರು. 250 ಎಸೆತಗಳಿಗೆ ಎರಡು ಸಿಕ್ಸರ್‌ ಹಾಗೂ 19 ಬೌಂಡರಿಯೊಂದಿಗೆ ಅಜೇಯ 204 ರನ್‌ ಗಳಿಸಿದರು. 
ಪ್ರಥಮ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ದ ಗಿಲ್‌ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಇನಿಂಗ್ಸ್‌ ಕಟ್ಟುವ ಮೂಲಕ ದ್ವಿಶತಕ ಸಿಡಿಸಿ ಎಲ್ಲರ ಪ್ರೀತಿಗೆ ಭಾಜನರಾದರು. ಒಟ್ಟಾರೆ ಭಾರತ(ಎ) 90 ಓವರ್‌ಗಳಿಗೆ ನಾಲ್ಕು ವಿಕೆಟ್‌ ನಷ್ಟಕ್ಕೆ 365 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಳುವ ಮೂಲಕ ವೆಸ್ಟ್‌ ಇಂಡೀಸ್‌ಗೆ 373 ರನ್‌ ಗುರಿ ನೀಡಿತು. 
ಬಳಿಕ ಗುರಿ ಹಿಂಬಾಲಿಸಿ ವೆಸ್ಟ್ ಇಂಡೀಸ್‌(ಎ) ಮೂರನೇ ದಿನದ ಮುಕ್ತಾಯಕ್ಕೆ 15 ಓವರ್‌ಗಳಿಗೆ ವಿಕೆಟ್‌ ನಷ್ಟವಿಲ್ಲದೆ 37 ರನ್‌ ಗಳಿಸಿದೆ.ಮೊಂಟ್ಸಿನ್‌ ಹಾಡ್ಜ್‌ 15 ರನ್‌ ಹಾಗೂ ಜೆರೆಮಿ ಸೊಲೊಜನೊ 20 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇನ್ನೂ, ಆತಿಥೇಯರ ಗೆಲುವಿಗೆ 336 ರನ್‌ ಅಗತ್ಯವಿದೆ.
ಸಂಕ್ಷಿಪ್ತ ಸ್ಕೋರು
ಭಾರತ(ಎ)
ಪ್ರಥಮ ಇನಿಂಗ್ಸ್: 201
ದ್ವಿತೀಯ ಇನಿಂಗ್ಸ್‌: 365/4 (90)
ಶುಭಮನ್‌ ಗಿಲ್‌-204*
ಹನುಮ ವಿಹಾರಿ-118*
ಬೌಲಿಂಗ್‌: ಚೇಮರ್‌ ಹೋಲ್ಡರ್‌ 88 ಕ್ಕೆ 2, ಮಿಗ್ಯೂಲ್‌ ಕಮಿನ್ಸ್‌ 28 ಕ್ಕೆ 1, ಅಕೀಮ್‌ ಫ್ರಜರ್‌ 104 ಕ್ಕೆ 1
ವೆಸ್ಟ್‌ ಇಂಡೀಸ್‌
ಪ್ರಥಮ ಇನಿಂಗ್ಸ್‌: 194
ದ್ವಿತೀಯ ಇನಿಂಗ್ಸ್‌: 37/0 (15)
ಮೊಟ್ಸಿನ್‌ ಹಾಡ್ಜ್‌-15*
ಜೆರೆಮಿ ಸೊಲೊಜನೊ-20*
ಯುಎನ್ಐ ಆರ್‌ಕೆ ಜಿಎಸ್‌ಆರ್‌ 1202

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com