ಮೂರನೇ ಟೆಸ್ಟ್ ಡ್ರಾ: 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತ(ಎ)
ಭಾರತ(ಎ) ಹಾಗೂ ವೆಸ್ಟ್ ಇಂಡೀಸ್(ಎ) ತಂಡಗಳ ನಡುವಿನ ಮೂರನೇ ಅನಧಿಕೃತ ಟೆಸ್ಟ್ ಪಂದ್ಯ ಅಂತಿಮವಾಗಿ ಡ್ರಾ ಆಯಿತು. ಕಳೆದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ 2-0 ಅಂತರದಲ್ಲಿ ಟೆಸ್ಟ್ ಸರಣಿ ತನ್ನದಾಗಿಸಿಕೊಂಡಿತು.
Published: 10th August 2019 12:00 AM | Last Updated: 12th August 2019 04:50 PM | A+A A-

ಟ್ರಿನಿಡಾಡ್: ಭಾರತ(ಎ) ಹಾಗೂ ವೆಸ್ಟ್ ಇಂಡೀಸ್(ಎ) ತಂಡಗಳ ನಡುವಿನ ಮೂರನೇ ಅನಧಿಕೃತ ಟೆಸ್ಟ್ ಪಂದ್ಯ ಅಂತಿಮವಾಗಿ ಡ್ರಾ ಆಯಿತು. ಕಳೆದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ 2-0 ಅಂತರದಲ್ಲಿ ಟೆಸ್ಟ್ ಸರಣಿ ತನ್ನದಾಗಿಸಿಕೊಂಡಿತು.
ಇಲ್ಲಿನ ಬ್ರಿಯನ್ ಲಾರ ಕ್ರೀಡಾಂಗಣದಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ವೆಸ್ಟ್ ಇಂಡೀಸ್(ಎ) ನಾಲ್ಕನೇ ಹಾಗೂ ಅಂತಿಮ ದಿನದ ಮುಕ್ತಾಯಕ್ಕೆ 109 ಓವರ್‌ಗಳಿಗೆ ಆರು ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿತು. ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.
ಶುಕ್ರವಾರ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್(ಎ) ಗೆಲುವಿಗೆ 336 ರನ್ ಅಗತ್ಯವಿತ್ತು. ಬ್ಯಾಟಿಂಗ್‌ಗೆ ಇಳಿದ ಮೊಟ್ಸಿನ್ ಹಾಡ್ಜ್ ಹಾಗೂ ಜೆರೆಮಿ ಸೊಲೊಜನೊ ಜೋಡಿಯು ಮುರಿಯದ ಮೊದಲನೇ ವಿಕೆಟ್‌ಗೆ 68 ರನ್ ಜತೆಯಾಟವಾಡಿತು. ಮೊಟ್ಸಿನ್ ಹಾಡ್ಜ್ ಅವರು ಕೇವಲ 25 ರನ್ ಗಳಿಗೆ ಸೀಮಿತರಾದರು.