ರೋಹಿತ್ ಶರ್ಮಾ, ರವೀಂದ್ರ ಜಡೇಜಾ 'ಹೆಡ್ಸ್ ಅಪ್' ಚಾಲೆಂಜ್ ಫುಲ್ ವೈರಲ್!

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಕ್ರಿಕೆಟ್ ಹೊರತಾಗಿಯೂ ಸುದ್ದಿಯಾಗುತ್ತಿದ್ದು, ವಿರಾಟ್ ಕೊಹ್ಲಿ ಡ್ಯಾನ್ಸ್ ವೈರಲ್ ಆದ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ, ರವೀಂದ್ರ ಜಡೇಜಾ 'ಹೆಡ್ಸ್ ಅಪ್' ಚಾಲೆಂಜ್ ಕೂಡ ವೈರಲ್ ಆಗಿದೆ.

Published: 10th August 2019 01:24 AM  |   Last Updated: 12th August 2019 03:13 PM   |  A+A-


Heads Up challenge

ರೋಹಿತ್ ಶರ್ಮಾ ಹೆಡ್ಸ್ ಅಪ್ ಚಾಲೆಂಜ್

Posted By : Srinivasamurthy VN
Source : IANS

ಗಯಾನಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಕ್ರಿಕೆಟ್ ಹೊರತಾಗಿಯೂ ಸುದ್ದಿಯಾಗುತ್ತಿದ್ದು, ವಿರಾಟ್ ಕೊಹ್ಲಿ ಡ್ಯಾನ್ಸ್ ವೈರಲ್ ಆದ ಬೆನ್ನಲ್ಲೇ ಇದೀಗ ರೋಹಿತ್ ಶರ್ಮಾ, ರವೀಂದ್ರ ಜಡೇಜಾ 'ಹೆಡ್ಸ್ ಅಪ್' ಚಾಲೆಂಜ್ ಕೂಡ ವೈರಲ್ ಆಗಿದೆ.

ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್ ಶರ್ಮಾ ತಮ್ಮ ಸಹ ಆಟಗಾರ ರವೀಂದ್ರ ಜಡೇಜಾ ಜತೆಗೆ ಹೆಡ್ಸ್ ಅಪ್ ಚಾಲೆಂಜ್ ಆಡುವ ಮೂಲಕ ಗಮನ ಸೆಳೆದಿದ್ದಾರೆ. 

ರೋಹಿತ್ ಶರ್ಮಾ ರವೀಂದ್ರ ಜಡೇಜಾ ಜತೆ ಸೇರಿ ಹೆಡ್ಸ್ ಅಪ್ ಚಾಲೆಂಜ್ ಆಟವಾಡಿದ್ದು, ಬಿಳಿ ಕಾಗದದಲ್ಲಿ ಬರೆದ ಹೆಸರನ್ನು ರೋಹಿತ್ ತಾವು ನೋಡದೆ ಜಡೇಜಾಗೆ ತೋರಿಸುತ್ತಾರೆ. ಬಳಿಕ ಇದನ್ನು ಜಡೇಜಾ ತಮ್ಮ ಹಾವಭಾವಗಳ ಮೂಲಕ ಹೇಳಲು ಪ್ರಯತ್ನಿಸುತ್ತಾರೆ. ಬಳಿಕ ಅದು ಯಾವ ಆಟಗಾರ ಎಂಬುದನ್ನು ರೋಹಿತ್ ಶರ್ಮಾ ಹೇಳಬೇಕಾಗುತ್ತದೆ. ಮೊದಲು ಜಸ್ಪ್ರೀತ್ ಬುಮ್ರಾ ಹಾಗೂ ಬಳಿಕ ವಿರಾಟ್ ಕೊಹ್ಲಿ ಅವರ ಹೆಸರುಗಳನ್ನು ರೋಹಿತ್ ಶರ್ಮಾ ಕಂಡುಹಿಡಿಯುವಲ್ಲಿ ಯಶಸ್ವಿಯಾಗುತ್ತಾರೆ. ಪಕ್ಕದಲ್ಲೇ ಇದನ್ನು ನೋಡುತ್ತಿದ್ದ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ನಕ್ಕು ಹಾಸ್ಯಕ್ಕೆ ಬೆಂಬಲ ವ್ಯಕ್ತಪಡಿಸುತ್ತಾರೆ.

ಇನ್ನೊಂದೆಡೆ ಯುವ ಆಟಗಾರ ಶ್ರೇಯಸ್ ಅಯ್ಯರ್ ಜತೆಗೆ ಶಿಖರ್ ಧವನ್ ಸ್ಪೀಕ್ ಔಟ್ ಚಾಲೆಂಜ್ ವಿಡಿಯೋ ಕೂಡ ವೈರಲ್ ಆಗಿದ್ದು, ಬಾಯಿಗೆ ಪ್ಲಾಸ್ಟಿಕ್ ಪದರ ಹಾಕಿಕೊಂಡು ತುಟಿಗಳು ಒಂದಕ್ಕೊಂದು ಸ್ಪರ್ಶವಾಗದಂತೆ ಆಟಗಾರರ ಹೆಸರು ಹೇಳಲು ಪ್ರಯತ್ನಿಸುತ್ತಾರೆ. ಈ ವೇಳೆ ಧವನ್ ಮಾಡಿದ ಹಾಸ್ಯಕ್ಕೆ ಶ್ರೇಯ್ಯರ್ ನಕ್ಕು ನಕ್ಕು ಸುಸ್ತಾಗುತ್ತಾರೆ. 

ಈ ಎರಡು ವೀಡಿಯೋಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಅಪ್ಲೋಡ್ ಮಾಡಿದ್ದು, ಈ ಎರಡೂ ವಿಡಿಯೋಗಳು ವ್ಯಾಪಕ ವೈರಲ್ ಆಗಿದೆ.
 

Stay up to date on all the latest ಕ್ರಿಕೆಟ್ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp