ಕ್ರಿಸ್ ಗೇಯ್ಲ್ ವೃತ್ತಿ ಜೀವನದ ಕೊನೆ ಆಸೆಗೆ ಕೊಳ್ಳಿ: ವಿಂಡೀಸ್‌ ಟೆಸ್ಟ್‌ ತಂಡದಿಂದ ಗೇಯ್ಲ್ ಔಟ್‌

ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತೇನೆಂದು ಕ್ರಿಸ್ ಗೇಲ್ ವಿಶ್ವಕಪ್ ಟೂರ್ನಿ ವೇಳೆ ಹೇಳಿಕೊಂಡಿದ್ದರು. ಆದರೆ, ಅವರನ್ನು ವಿಂಡೀಸ್ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ.

Published: 10th August 2019 05:07 PM  |   Last Updated: 10th August 2019 05:07 PM   |  A+A-


Posted By : Vishwanath S
Source : UNI

ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾ ವಿರುದ್ಧದ ಟೆಸ್ಟ್ ಸರಣಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತೇನೆಂದು ಕ್ರಿಸ್ ಗೇಲ್ ವಿಶ್ವಕಪ್ ಟೂರ್ನಿ ವೇಳೆ ಹೇಳಿಕೊಂಡಿದ್ದರು. ಆದರೆ, ಅವರನ್ನು ವಿಂಡೀಸ್ ಟೆಸ್ಟ್ ತಂಡದಿಂದ ಕೈಬಿಡಲಾಗಿದೆ. 

ಆ.22 ರಿಂದ ಅಂಟಿಗುವಾದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಆದರೆ, ಕೊನೆಯ ಟೆಸ್ಟ್ ಸರಣಿ ಆಡಿದ ವಿದಾಯ ಹೇಳಬೇಕೆಂಬ ಯೋಜನೆಯಲ್ಲಿದ್ದ ಗೇಲ್ ಗೆ ಕ್ರಿಕೆಟ್ ವೆಸ್ಟ್ ಇಂಡೀಸ್ ತೀವ್ರ ನಿರಾಸೆ ಮೂಡಿಸಿದೆ. ಹಾಗಾಗಿ, ಅವರು ಏಕದಿನ ಸರಣಿ ಬಳಿಕ ಕ್ರಿಕೆಟ್ ಗೆ ಗುಡ್ ಬೈ ಹೇಳಬಹುದಾಗಿದೆ. 
 
ಇನ್ನೂ ನನ್ನ ವೃತ್ತಿ ಜೀವನ ಮುಗಿದಿಲ್ಲ. ಇನ್ನೂ ಕೆಲ ಪಂದ್ಯಗಳು ಉಳಿದಿವೆ. ವಿಶ್ವಕಪ್ ಬಳಿಕ ಕೆಲ ಸರಣಿಗಳ ಬಳಿಕ ವಿದಾಯ ಘೋಷಿಸುವುದಾಗಿ ಹೇಳಿಕೊಂಡಿದ್ದರು. ಅದರಂತೆ, ಭಾರತದ ವಿರುದ್ಧ ಟೆಸ್ಟ್ ಸರಣಿ ಬಳಿಕ ಅಂತಾರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತೇನೆ ಎಂದು ವಿಶ್ವಕಪ್ ವೇಳೆ ಗೇಲ್ ತಿಳಿಸಿದ್ದರು.

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಎಂಟು ಇನಿಂಗ್ಸ್ ಗಳಿಂದ 242 ರನ್ ಗಳಿಸಿದ್ದರು. ಅಲ್ಲದೇ, ಮೊದಲನೇ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ್ದರು. ಕೇವಲ 4 ರನ್ ಗಳಿಸಿ ಕುಲ್ದೀಪ್ ಯಾದವ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. 

ಶನಿವಾರ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 13 ಆಟಗಾರರ ಟೆಸ್ಟ್ ತಂಡವನ್ನು ವಿಂಡೀಸ್ ಕ್ರಿಕೆಟ್ ಮಂಡಳಿ ಪ್ರಕಟಿಸಿತ್ತು. ಆಫ್ ಸ್ಪಿನ್ನರ್ ರಕೀಮ್ ಕಾರ್ನ್ ವಲ್ ಅವರಿಗೆ ಮೊಟ್ಟ ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಲಾಗಿದೆ. 2014ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪದಾರ್ಪಣೆ ಮಾಡಿದ್ದ ಅವರು 55 ಪಂದ್ಯಗಳಿಂದ 260 ವಿಕೆಟ್ ಪಡೆದಿದ್ದಾರೆ.

ವೆಸ್ಟ್ ಇಂಡೀಸ್ ಟೆಸ್ಟ್ ತಂಡ: ಜೇಸನ್ ಹೋಲ್ಡರ್ (ನಾಯಕ), ಕ್ರೈಗ್ ಬ್ರಾಥ್ ವೇಟ್, ಡೆರೆನ್ ಬ್ರಾವೊ, ಶಮರಹ್ ಬ್ರೂಕ್ಸ್, ಜಾನ್ ಕ್ಯಾಂಪ್ ಬೆಲ್, ರೋಸ್ಟನ್ ಚೇಸ್, ರಕೀಮ್ ಕಾರ್ನ್ ವಲ್, ಶೇನ್ ಡೌರಿಚ್, ಶನ್ನೋನ್ ಗ್ಯಾಬ್ರಿಯಲ್, ಶಿಮ್ರಾನ್ ಹೆಟ್ಮೇರ್, ಶಾಯ್ ಹೋಪ್, ಕಿಮೋ ಪಾಲ್, ಕೇಮರ್ ರೋಚ್

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp