2ನೇ ಏಕದಿನ: ವಿಂಡೀಸ್ ವಿರುದ್ಧ ಕೊಹ್ಲಿ ಭರ್ಜರಿ ಶತಕ, ಹಲವು ದಾಖಲೆಗಳು ನುಚ್ಚುನೂರು

ವೆಸ್ಟ್ ಇಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದು, ಈ ಒಂದು ಶತಕದ ಮೂಲಕ ಕೊಹ್ಲಿ ಕ್ರಿಕೆಟ್ ಲೋಕದ ಹಲವು ದಿಗ್ಗಜರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

Published: 11th August 2019 12:00 AM  |   Last Updated: 12th August 2019 03:44 PM   |  A+A-


Posted By : Vishwanath S
Source : Online Desk

ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದು, ಈ ಒಂದು ಶತಕದ ಮೂಲಕ ಕೊಹ್ಲಿ ಕ್ರಿಕೆಟ್ ಲೋಕದ ಹಲವು ದಿಗ್ಗಜರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ಹೌದು.. ಇಂದು ಟ್ರಿನಿಡಾಡ್ ನ ಪೋರ್ಟ್ ಆಫ್ ಸ್ಪೇನ್ ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಮತ್ತೊಂದು ಶತಕ ಸಾಧನೆ ಮಾಡಿದ್ದಾರೆ. 112 ಎಸೆತಗಳಲ್ಲಿ 100 ರನ್ ಗಳಿಸಿದ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ತಮ್ಮ 42ನೇ ಶತಕ ಗಳಿಸಿದರು. ಅಂತೆಯೇ ಈ ಶತಕದ ಮೂಲಕ ಕಿಂಗ್ ಕೊಹ್ಲಿ ಹಲವು ದಾಖಲೆಗಳ ಸರದಾರರಾಗಿದ್ದು, ಕ್ರಿಕೆಟ್ ಲೋಕದ ದಿಗ್ದಜರ ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

2ನೇ ಏಕದಿನ ಪಂದ್ಯದಲ್ಲಿ 19 ರನ್ ಗಳಿಸಿದ್ದಾಗ ಕೊಹ್ಲಿ ಪಾಕಿಸ್ತಾನದ ಲೆಜೆಂಡ್ ಆಟಗಾರ ಜಾವೆದ್ ಮಿಯಾಂದಾದ್ ಅವರ 26 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಜಾವೇದ್ ಮಿಯಾಂದಾದ್ ವಿಂಡೀಸ್ ವಿರುದ್ಧ 1930 ರನ್ ಬಾರಿಸಿದ್ದಾರೆ. ಇದಕ್ಕಾಗಿ ಜಾವೇದ್ 64 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಆದರೆ ಕೊಹ್ಲಿ 34ನೇ ಇನ್ನಿಂಗ್ಸ್ ನಲ್ಲಿ ದಾಖಲೆ ಮುರಿದಿದ್ದು, ವಿಂಡೀಸ್ ವಿರುದ್ಧ ಕೇವಲ 34 ಇನ್ನಿಂಗ್ಸ್ ಗಳಲ್ಲಿ 2,032‬ ರನ್ ಗಳಿಸಿ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. 

ಅಂತೆಯೇ ಇಂದಿನ ಶತಕದ ಮೂಲಕವೂ ಕೊಹ್ಲಿ ಹಲವು ದಾಖಲೆಗಳನ್ನು ಮುರಿದಿದ್ದು, ಭಾರತ ತಂಡದ ಪರ ತಂಡವೊಂದರ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಸ್ಚ್ರೇಲಿಯಾ ವಿರುದ್ಧ 9 ಮತ್ತು ಶ್ರೀಲಂಕಾ ವಿರುದ್ಧ 8 ಶತಕ ಸಿಡಿಸಿ ಅಗ್ರಸ್ಥಾನಿಯಾಗಿದ್ದಾರೆ. ಕೊಹ್ಲಿ ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ವಿಂಡೀಸ್ ವಿರುದ್ಧ ತಲಾ 8 ಶತಕ ಸಿಡಿಸಿದ್ದಾರೆ.

ಇನ್ನು ನಾಯಕನಾಗಿಯೂ ಕೊಹ್ಲಿ ದಾಖಲೆ ನಿರ್ಮಾಣ ಮಾಡಿದ್ದು, ತಂಡದ ನಾಯಕನಾಗಿ ಭಾರತದ ಪರ ತಂಡವೊಂದರ ವಿರುದ್ಧ ಗರಿಷ್ಛ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ವಿಂಡೀಸ್ ವಿರುದ್ಧ ಕೊಹ್ಲಿ 6 ಶತಕ ಸಿಡಿಸಿದ್ದು, ಆ ಮೂಲಕ ಆಸ್ಟ್ರೇಲಿಯಾದ ಲೆಜೆಂಡ್ ಅಟಗಾರ ರಿಕಿ ಪಾಟಿಂಗ್ ದಾಖಲೆ ಮುರಿದಿದ್ದಾರೆ. ಪಾಟಿಂಗ್ ನ್ಯೂಜಿಲೆಂಡ್ ವಿರುದ್ಧ 5 ಶತಕ ಸಿಡಿಸಿ ಈ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದ್ದರು. ಉಳಿದಂತೆ ಇಂಗ್ಲೆಂಡ್ ವಿರುದ್ಧ ಪಾಂಟಿಂಗ್ 4, ಇಂಗ್ಲೆಂಡ್ ವಿರುದ್ಧ 4 ಮತ್ತು ಭಾರತದ ವಿರುದ್ಧವೂ 4 ಶತಕ ಸಿಡಿಸಿದ್ದಾರೆ. ಅಂತೆಯೇ ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್ ಭಾರತದ ವಿರುದ್ಧ 4 ಶತಕ ಸಿಡಿಸಿದ್ದಾರೆ.

ನಾಯಕನಾಗಿ ಗರಿಷ್ಠ ಶತಕ
ಇದೇ ವೇಳೆ ಕೊಹ್ಲಿ ನಾಯಕನಾಗಿ ಗರಿಷ್ಠ ಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾಗಿದ್ದು, ಕೊಹ್ಲಿ ನಾಯಕನಾಗಿಯೇ ಒಟ್ಟು 20 ಶತಕ ಸಿಡಿಸಿದ್ದಾರೆ. ಅಲ್ಲದೆ 42 ಶತಕಗಳ ಪೈಕಿ ಕೊಹ್ಲಿ ಧೋನಿ ನಾಯಕತ್ವದಲ್ಲಿ 19, ಸೆಹ್ವಾಗ್ ನಾಯಕತ್ವದಲ್ಲಿ 2 ಮತ್ತು ಗಂಭೀರ್ ನಾಯಕತ್ವದಲ್ಲಿ 1 ಶತಕ ಸಿಡಿಸಿದ್ದಾರೆ.

Stay up to date on all the latest ಕ್ರಿಕೆಟ್ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp