ತಲೆಗೆ ಚೆಂಡು ತಗುಲಿ ಇಂಗ್ಲೆಂಡ್‌ ಅಂಪೈರ್‌ ಸಾವು

ಇಂಗ್ಲೆಂಡ್‌ನಲ್ಲಿ ನಡೆದಿದ್ದ ಹವ್ಯಾಸಿ ಪಂದ್ಯವೊಂದರಲ್ಲಿ ತಲೆಗೆ ಚೆಂಡು ತಗುಲಿಸಿಕೊಂಡು ಒಂದು ತಿಂಗಳು ಕೋಮಾದಲ್ಲಿದ್ದ ಅಂಪೈರ್‌ ಗುರುವಾರ ಕೊನೆಯುಸಿರೆಳೆದಿದ್ದಾರೆ. 
ಜಾನ್‌ ವಿಲಿಯಮ್ಸ್‌
ಜಾನ್‌ ವಿಲಿಯಮ್ಸ್‌

ಲಂಡನ್‌: ಇಂಗ್ಲೆಂಡ್‌ನಲ್ಲಿ ನಡೆದಿದ್ದ ಹವ್ಯಾಸಿ ಪಂದ್ಯವೊಂದರಲ್ಲಿ ತಲೆಗೆ ಚೆಂಡು ತಗುಲಿಸಿಕೊಂಡು ಒಂದು ತಿಂಗಳು ಕೋಮಾದಲ್ಲಿದ್ದ ಅಂಪೈರ್‌ ಗುರುವಾರ ಕೊನೆಯುಸಿರೆಳೆದಿದ್ದಾರೆ. 

80ರ ಪ್ರಾಯದ ಜಾನ್‌ ವಿಲಿಯಮ್ಸ್‌ ಮೃತಪಟ್ಟ ಅಂಪೈರ್‌ ಆಗಿದ್ದು, ಜುಲೈ 13 ರಂದು ಪೆಂಬ್ರೋಕ್‌ ಮತ್ತು ನರ್ಬೆಥ್‌ ತಂಡಗಳ ನಡುವಿನ ಪೆಂಬ್ರೋಕ್‌ಶೈರ್‌ ಕೌಂಟಿ ಎರಡನೇ ದರ್ಜೆಯ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿರುವಾಗ ಅವರ ತಲೆಗೆ ಚೆಂಡು ಬಲವಾಗಿ ತಗುಲಿತ್ತು.
 
ತಕ್ಷಣ ಅವರನ್ನು ಕಾರ್ಡಿಫ್‌ನಲ್ಲಿರುವ  ಆಸ್ಪತ್ರೆಗೆ ಸೇರಿಸಲಾಯಿತು. ಚೆಂಡು ತಗುಲಿದ್ದರಿಂದ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ನಂತರ ಅವರನ್ನು ಆಗಸ್ಟ್‌ 1 ರಂದು ಹ್ಯಾವೆರ್‌ಪೋರ್ಡ್‌ನಲ್ಲಿ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇಲ್ಲಿಗೆ ದಾಖಳಿಸಿದ ಎರಡು ವಾರಗಳ ನಂತರ ಅವರು ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರೆಳೆದಿದ್ದಾರೆಂದು ಬಿಬಿಸಿ ವರದಿ ಮಾಡಿದೆ. 

ಪೆಂಬ್ರೋಕ್‌ಶೈರ್‌ ಕ್ರಿಕೆಟ್‌ ಗುರುವಾರ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಜಾನ್‌ ವಿಲಿಯಮ್ಸ್‌ ಅವರ ನಿಧನದ ವಿಷಯವನ್ನು ತಿಳಿಸಿತ್ತು. "ಜಾನ್‌ ವಿಲಿಯಮ್ಸ್‌ ಅವರು ವಿಧಿವಶರಾಗಿದ್ದು, ಅವರು ತಮ್ಮ ಕುಟುಂಬವನ್ನು ಅಗಲಿದ್ದಾರೆ. ಪೆಂಬ್ರೋಕ್‌ಶೈರ್‌ ಕ್ರಿಕೆಟ್‌ ಮತ್ತು ಎಲ್ಲ ಆಟಗಾರರು ಅವರ ಸಾವಿನ ದುಖಃದಲ್ಲಿ ಭಾಗಿಯಾಗಿದ್ದಾರೆಂದು " ಟ್ವೀಟ್‌ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com