ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಇಂಗ್ಲೆಂಡ್ ತಂಡದ ನಾಯಕತ್ವಕ್ಕೆ ಇಯಾನ್ ಮಾರ್ಗನ್ ಗುಡ್ ಬೈ?

ಕ್ರಿಕೆಟ್ ಜನಕರು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್‌ಗೆ ಚೊಚ್ಚಲ ಐಸಿಸಿ ವಿಶ್ವಕಪ್‌ ತಂದುಕೊಟ್ಟ ನಾಯಕ ಇಯಾನ್ ಮಾರ್ಗನ್‌ ಇದೀಗ ತಮ್ಮ ನಾಯಕತ್ವಕ್ಕೆ ಗುಡ್ ಬೈ ಹೇಳಲಿದ್ದಾರೆ.
ಇಯಾನ್ ಮಾರ್ಗನ್
ಇಯಾನ್ ಮಾರ್ಗನ್

ಲಂಡನ್‌: ಕ್ರಿಕೆಟ್ ಜನಕರು ಎಂದು ಕರೆಸಿಕೊಳ್ಳುವ ಇಂಗ್ಲೆಂಡ್‌ಗೆ ಚೊಚ್ಚಲ ಐಸಿಸಿ ವಿಶ್ವಕಪ್‌ ತಂದುಕೊಟ್ಟ ನಾಯಕ ಇಯಾನ್ ಮಾರ್ಗನ್‌ ಇದೀಗ ತಮ್ಮ ನಾಯಕತ್ವಕ್ಕೆ ಗುಡ್ ಬೈ ಹೇಳಲಿದ್ದಾರೆ.

ಸತತವಾಗಿ ಗಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಯಾನ್ ಮಾರ್ಗನ್‌ ನಿಗದಿತ ಓವರ್‌ಗಳ ತಂಡದ ನಾಯಕತ್ವದಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ.

ಸೌಥ್‌ಹ್ಯಾಮ್ಟನ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ ಟೂರ್ನಿಯ ವೆಸ್ಟ್ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಮಾರ್ಗನ್‌ ಬೆನ್ನು ಸೆಳೆತಕ್ಕೆ ಒಳಗಾಗಿದ್ದರು. ಇನ್ನೂ ಅವರು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹಾಗಾಗಿ, ಇಂಗ್ಲೆಂಡ್‌ ತಂಡದ ನಾಯಕತ್ವವನ್ನು ತೊರೆಯುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ. 

ಮುಂಬರುವ ಐಸಿಸಿ ಟಿ-20 ವಿಶ್ವಕಪ್‌ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುತ್ತೀರಾ ಎಂದು ಟೆಸ್ಟ್‌ ವಿಶೇಷ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೊಡ್ಡ ನಿರ್ಧಾರ-ದೊಡ್ಡ ಬದ್ಧತೆ ಇದಾಗಿದೆ. ಹಾಗಾಗಿ, ಇದರ ಬಗ್ಗೆ ಯೋಚನೆ ಮಾಡಲು ಹೆಚ್ಚಿನ ಸಮಯಬೇಕು ಎಂದು ಮಾರ್ಗನ್‌ ಹೇಳಿದರು.

ವಿಶ್ವಕಪ್‌ ಟೂರ್ನಿಯಲ್ಲಿ ಗಾಯದ ನಡುವೆಯೂ ಆಡಬೇಕಾಯಿತು. ಗಾಯದಿಂದ ಸಂಪೂರ್ಣ ಫಿಟ್‌ ಆಗಬೇಕಾದರೆ ಇನ್ನೂ ಹೆಚ್ಚಿನ ಸಮಯಬೇಕು. ಮುಂಬರುವ ಟಿ-20 ವಿಶ್ವಕಪ್‌ನಲ್ಲೂ ತಂಡವನ್ನು ಮುನ್ನಡೆಸುವ ಆಲೋಚನೆ ಇದೆ. ಆದರೆ, ತನ್ನ ಹಿತಾಸಕ್ತಿಯಿಂದ ಬೇರೆ ಯಾರನ್ನೂ ತುಳಿಯಲು ನನಗೆ ಇಷ್ಟವಿಲ್ಲ ಎಂದು ಮಾರ್ಗನ್‌ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com