ಆ್ಯಶಸ್  ಟೆಸ್ಟ್ ಸರಣಿ ಬಗ್ಗೆ ದಾದಾ ಹೇಳಿದ್ದೇನು?

ಸ್ತುತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆ್ಯಶಸ್  ಸರಣಿಯ ಗುಣಮಟ್ಟ ಗಮನಿಸಿದರೆ ಟೆಸ್ಟ್  ಕ್ರಿಕೆಟ್ ಇನ್ನೂ ಜೀವಂತವಾಗಿದೆ ಎಂಬುದು ಅರಿವಾಗಲಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ
ಸೌರವ್ ಗಂಗೂಲಿ
ಸೌರವ್ ಗಂಗೂಲಿ

ನವದೆಹಲಿ: ಪ್ರಸ್ತುತ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಆ್ಯಶಸ್  ಸರಣಿಯ ಗುಣಮಟ್ಟ ಗಮನಿಸಿದರೆ ಟೆಸ್ಟ್  ಕ್ರಿಕೆಟ್ ಇನ್ನೂ ಜೀವಂತವಾಗಿದೆ ಎಂಬುದು ಅರಿವಾಗಲಿದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.ಇನ್ನುಳಿದ ಇತರೆ ದೇಶಗಳು ಕೂಡಾ ಟೆಸ್ಟ್ ಕ್ರಿಕೆಟ್ ನಲ್ಲಿ ಇದೇ ರೀತಿಯ ಗುಣಮಟ್ಟ ಕಾಯ್ದುಕೊಳ್ಳಬೇಕೆಂದು ದಾದಾ ಕರೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಗಂಗೂಲಿ, '' ಸದ್ಯ ನಡೆಯುತ್ತಿರುವ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ಪ್ರದರ್ಶನದ ಗುಣಮಟ್ಟ ಗಮನಿಸಿದರೆ  ಟೆಸ್ಟ್ ಕ್ರಿಕೆಟ್ ಇನ್ನೂ ಜೀವಂತವಾಗಿದೆ. ಇನ್ನುಳಿದ ದೇಶಗಳೂ ಕೂಡಾ ಟೆಸ್ಟ್ ಕ್ರಿಕೆಟ್ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಐದು ಪಂದ್ಯಗಳ ಆ್ಯಶಸ್ ಸರಣಿಯ ಮೊದಲೆರೆಡು ಪಂದ್ಯಗಳಲ್ಲಿ ಉಭಯ ತಂಡಗಳಿಂದ ಗುಣಮಟ್ಟದ ಪ್ರದರ್ಶನ ಹೊರಹೊಮ್ಮಿದೆ. ಭಾನುವಾರ ದಿ ಲಾರ್ಡ್ಸ್  ಅಂಗಳದಲ್ಲಿ ಮುಕ್ತಾಯವಾದ ಎರಡನೇ ಪಂದ್ಯ ಡ್ರಾನಲ್ಲಿ ಸಮಾಪ್ತಿಯಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com