ಸ್ಪಾಟ್ ಫಿಕ್ಸಿಂಗ್: ಶ್ರೀಶಾಂತ್ ಮೇಲಿದ್ದ ಆಜೀವ ನಿಷೇಧ ಬಿಸಿಸಿಐನಿಂದ ತೆರವು!

ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಗೆ ಬಿಸಿಸಿಐ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದು ಸ್ಪಾಟ್ ಫಿಕ್ಸಿಂಗ್ ಸಂಬಂಧ ವಿಧಿಸಿದ್ದ ಆಜೀವ ನಿಷೇಧವನ್ನು ತೆರವುಗೊಳಿಸಿದೆ.
ಶ್ರೀಶಾಂತ್
ಶ್ರೀಶಾಂತ್

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಗೆ ಬಿಸಿಸಿಐ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದು ಸ್ಪಾಟ್ ಫಿಕ್ಸಿಂಗ್ ಸಂಬಂಧ ವಿಧಿಸಿದ್ದ ಆಜೀವ ನಿಷೇಧವನ್ನು ತೆರವುಗೊಳಿಸಿದೆ. 

2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ಬಿಸಿಸಿಐ ಶ್ರೀಶಾಂತ್ ಗೆ ಆಜೀವ ನಿಷೇಧ ಹೇರಿತ್ತು. ಇದೀಗ ಈ ಶಿಕ್ಷೆಯನ್ನು ಬಿಸಿಸಿಐ 7 ವರ್ಷಕ್ಕೆ ಇಳಿಕೆ ಮಾಡಿದೆ. ಅದರಂತೆ ಮುಂದಿನ ಆಗಸ್ಟ್ 7ರಿಂದ ಶ್ರೀಶಾಂತ್ ಆಡಬಹುದಾಗಿದೆ.

ಬಿಸಿಸಿಐ ವಿಧಿಸಿದ್ದ ಆಜೀವ ನಿಷೇಧವನ್ನು ಪ್ರಶ್ನಿಸಿ ಶ್ರೀಶಾಂತ್ ಕೋರ್ಟ್ ಮೆಟ್ಟಿಲೇರಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್ ಶ್ರೀಶಾಂತ್ ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಬಿಸಿಸಿಐ ಮಾತ್ರ ಆಜೀವ ನಿಷೇಧವನ್ನು ತೆರವುಗೊಳಿಸಿರಲಿಲ್ಲ. 

ಇದೀಗ ಬಿಸಿಸಿಐ ಒಂಬುಡ್ಸ್ ಮನ್ ಡಿಕೆ ಜೈನ್ ಶ್ರೀಶಾಂತ್ ಮೇಲಿನ ಆಜೀವ ಶಿಕ್ಷೆಯನ್ನು 7 ವರ್ಷಕ್ಕೆ ಇಳಿಕೆ ಮಾಡಿದ್ದು 2020ರ ಆಗಸ್ಟ್ 7ರಿಂದ ಶ್ರೀಶಾಂತ್ ಶಿಕ್ಷೆಯಿಂದ ವಿಮುಕ್ತರಾಗಲಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com