ಕ್ರಿಕೆಟ್: ಪೇಟಿಎಂ ತೆಕ್ಕೆಗೆ ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಶಿಪ್!

ಖ್ಯಾತ ಆನ್ ಲೈನ್ ಆ್ಯಪ್ ಆಧಾರಿತ ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ ಸಂಸ್ಥೆ ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಶಿಪ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬರೊಬ್ಬರಿ 326.80 ಕೋಟಿ ರೂ ನೀಡಿ ಮುಂದಿನ 4 ವರ್ಷಗಳ ಅವಧಿಗೆ ಟೈಟಲ್ ಸ್ಪಾನ್ಸರ್ ಶಿಪ್ ಖರೀದಿಸಿದ ಡಿಜಿಟಲ್ ಪಾವತಿ ಸಂಸ್ಥೆ

ಮುಂಬೈ: ಖ್ಯಾತ ಆನ್ ಲೈನ್ ಆ್ಯಪ್ ಆಧಾರಿತ ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ ಸಂಸ್ಥೆ ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಶಿಪ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಈ ಬಗ್ಗೆ ಸ್ವತಃ ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಬಿಸಿಸಿಐ ಅಧಿಕೃತ ಘೋಷಣೆ ಮಾಡಿದ್ದು, ಪೇಟಿಎಂ ಸಂಸ್ಥೆ ಬರೊಬ್ಬರಿ 326.80 ಕೋಟಿ ರೂ ನೀಡಿ ಮುಂದಿನ 4 ವರ್ಷಗಳ ಅವಧಿಗೆ ಟೈಟಲ್ ಸ್ಪಾನ್ಸರ್ ಶಿಪ್ ಖರೀದಿಸಿದೆ ಎಂದು ಹೇಳಿದೆ. ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಸಿಸಿಐನ ಸಿಇಒ ರಾಹುಲ್ ಜೋಹ್ರಿ ಅವರು, ಪೇಟಿಎಂ ಸಂಸ್ಥೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಟೀಂ ಇಂಡಿಯಾ ಟೈಟಲ್ ಸ್ಪಾನ್ಸರ್ ಶಿಪ್ ಮಾಡಲಿದೆ. ಪೇಟಿಎಂ ಸಂಸ್ಥೆ ಬಿಸಿಸಿಐನಿಂದ ಮಾಡಿಕೊಂಡಿದ್ದ ಒಪ್ಪಂದ ಮುಂದಿನ ನಾಲ್ಕು ವರ್ಷಗಳಿಗೆ ಮುಂದುವರೆಯಲಿದೆ ಎಂದು ಹೇಳದ್ದಾರೆ.

ಇನ್ನು 2015ರಿಂದಲೂ ಭಾರತ ತಂಡದ ಪರವಾಗಿ ಪೇಟಿಎಂ ಸಂಸ್ಥೆ ಟೈಟಲ್ ಸ್ಪಾನ್ಸರ್ ಶಿಪ್ ಪಡೆದುಕೊಂಡಿದೆ. 2015ರಲ್ಲಿ ಟೈಟಲ್ ಸ್ಪಾನ್ಸರ್ ಶಿಪ್ ಅನ್ನು ಸಂಸ್ಥೆ 203.28 ಕೋಟಿ ರೂ ನೀಡಿ ಪಡೆದಿತ್ತು. ಇದೀಗ ಬರೊಬ್ಬರಿ 326.80 ಕೋಟಿ ರೂ ನೀಡಿ ಮುಂದಿನ 4 ವರ್ಷಗಳ ಅವಧಿಗೆ ಟೈಟಲ್ ಸ್ಪಾನ್ಸರ್ ಶಿಪ್ ಖರೀದಿಸಿದೆ.

ಅದರಂತೆ ಮುಂದಿನ ನಾಲ್ಕು ವರ್ಷಗಳ ಕಾಲ ಭಾರತದಲ್ಲಿ ನಡೆಯಲಿರುವ ಎಲ್ಲ ಅಂತಾರಾಷ್ಟ್ರೀಯ ಮತ್ತು ದೇಶೀ ಕ್ರಿಕೆಟ್ ಟೂರ್ನಿಗಳಲ್ಲಿ ಪೇಟಿಎಂ ಸಂಸ್ಥೆ ಟೈಟಲ್ ಸ್ಪಾನ್ಸರ್ ಶಿಪ್ ಪಡೆದುಕೊಂಡಿದೆ ಎನ್ನಲಾಗಿದೆ.

ಇನ್ನು ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಅಲ್ಲಿ ಟೆಸ್ಟ್ ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ಸ್ವದೇಶಕ್ಕೆ ಆಗಮಿಸಲಿದೆ. ಇಲ್ಲಿ ಸೆಪ್ಟೆಂಬರ್ 15ರಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಂಡಿದ್ದು, ಇಲ್ಲಿ 3 ಟಿ20 ಮತ್ತು 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com