ರೋಹಿತ್ ಶರ್ಮಾಗೆ ಟೆಸ್ಟ್ ನಲ್ಲೂ ಆರಂಭಿಕ ಸ್ಥಾನ ನೀಡಿ: ದಾದಾ ಸಲಹೆ  

ನಿಗದಿತ ಓವರ್ ಗಳ ಮಾದರಿಯಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಯಶಸ್ವಿಯಾಗಿರುವ ರೋಹಿತ್ ಶರ್ಮಾ ಅವರನ್ನೇ ಟೆಸ್ಟ್ ಮಾದರಿಯಲ್ಲೂ ಆರಂಭಿಕನಾಗಿ ಆಡುವ ಅವಕಾಶ ನೀಡಬೇಕೆಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.

Published: 22nd August 2019 04:59 PM  |   Last Updated: 22nd August 2019 04:59 PM   |  A+A-


ಸೌರವ್ ಗಂಗೂಲಿ, ರೋಹಿತ್ ಶರ್ಮಾ

Posted By : Nagaraja AB
Source : UNI

ಮುಂಬೈ: ನಿಗದಿತ ಓವರ್ ಗಳ ಮಾದರಿಯಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಯಶಸ್ವಿಯಾಗಿರುವ ರೋಹಿತ್ ಶರ್ಮಾ ಅವರನ್ನೇ ಟೆಸ್ಟ್ ಮಾದರಿಯಲ್ಲೂ ಆರಂಭಿಕನಾಗಿ ಆಡುವ ಅವಕಾಶ ನೀಡಬೇಕೆಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸಲಹೆ ನೀಡಿದ್ದಾರೆ.

32ರ ಪ್ರಯಾದ ರೋಹಿತ್ ಶರ್ಮಾ ಅವರು ಟಿ-20 ಹಾಗೂ ಏಕದಿನ ಮಾದರಿಯಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅಲ್ಲದೇ, ಇಂಗ್ಲೆಂಡ್ ಹಾಗೂ ವೇಲ್ಸ್ ನಲ್ಲಿ ಇತ್ತೀಚಿಗೆ ಮುಕ್ತಾಯವಾಗಿದ್ದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ  ರೋಹಿತ್  ರನ್ ಗಳ ಹೊಳೆ ಹರಿಸಿದ್ದರು.

ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಮೂರು ಬಾರಿ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್ ಮನ್ ಆಗಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದ ರೋಹಿತ್ ಇನ್ನೂ ಯಶ ಕಂಡುಕೊಂಡಿಲ್ಲ.

ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ ತಂಡಕ್ಕೆ ಮರಳಿದ್ದ ರೋಹಿತ್‌ ನಾಲ್ಕು ಇನಿಂಗ್ಸ್‌ಗಳಲ್ಲಿ ಕೇವಲ 78 ರನ್‌ ಗಳಿಸಿದ್ದರು. ರೋಹಿತ್‌ ಶರ್ಮಾ ಅವರು ಕಳೆದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಲಯದಲ್ಲಿದ್ದರು. ಇದೀಗ ಅದೇ ಲಯವನ್ನು ಮುಂದುವರಿಸುವ ಸಾಧ್ಯತೆ ಇದೆ. ಹಾಗಾಗಿ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲನೇ ಪಂದ್ಯದಲ್ಲಿ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಿಸಬೇಕೆಂದು ಎಂದು ಗಂಗೂಲಿ ಸಲಹೆ ನೀಡಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp