ಮೊದಲ ಟೆಸ್ಟ್: ಇಶಾಂತ್ ಶರ್ಮಾ ದಾಳಿಗೆ ಪತರುಗುಟ್ಟಿದ ವಿಂಡೀಸ್ ದಾಂಡಿಗರು!

ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನು ಸವಾಲಿನ ಮೊತ್ತಕ್ಕೆ ಕಟ್ಟಿಹಾಕಿದ್ದ ಅತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಇಶಾಂತ್ ಶರ್ಮಾ ಶಾಕ್ ನೀಡಿದ್ದಾರೆ.
ಇಶಾಂತ್ ಶರ್ಮಾ
ಇಶಾಂತ್ ಶರ್ಮಾ

2ನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಹಿನ್ನಡೆಯಲ್ಲಿರುವ ಅತಿಥೇಯರು

ಆ್ಯಂಟಿಗುವಾ: ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನು ಸವಾಲಿನ ಮೊತ್ತಕ್ಕೆ ಕಟ್ಟಿಹಾಕಿದ್ದ ಅತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಇಶಾಂತ್ ಶರ್ಮಾ ಶಾಕ್ ನೀಡಿದ್ದಾರೆ.

ಆ್ಯಂಟಿಗುವಾದ ನಾರ್ತ್ ಸೌಂಡ್ ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಸಂಪೂರ್ಣ ಮೇಲುಗೈ ಸಾಧಿಸಿದೆ. ಪ್ರಮುಖವಾಗಿ ವಿಂಡೀಸ್ ದಾಂಡಿಗರನ್ನು ಕಟ್ಟಿಹಾಕುವಲ್ಲಿ ಭಾರತದ ಇಶಾಂತ್ ಶರ್ಮಾ ಅವರ ಅದ್ಭುತ ಪ್ರದರ್ಶನ ನೆರವಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನು 297ರನ್ ಗಳಿಗೆ ಕಟ್ಟಿಹಾಕಿದ್ದ ವಿಂಡೀಸ್ ತಂಡ ಅದೇ ಹುಮ್ಮಸ್ಸಿನಲ್ಲಿ ತನ್ನ ಪಾಲಿನ ಮೊದಲ ಇನ್ನಿಂಗ್ಸ್ ಆರಂಭಿಸಿತು. 

ಆದರೆ ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟದ ಎದುರು ವಿಂಡೀಸ್ ನ ಯಾವ ಯೋಜನೆಗಳೂ ಫಲ ನೀಡಲಿಲ್ಲ. ವಿಂಡೀಸ್ ಗೆ ಮಹಮದ್ ಶಮಿ ಆರಂಭಿಕ ಆಘಾತ ನೀಡಿದರು. 23 ರನ್ ಗಳಿಸಿದ್ದ ಕಾಂಬೆಲ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿ ಭಾರತಕ್ಕೆ ಶುಭಾರಂಭ ತಂದಿತ್ತರು. ಬಳಿಕ ಕ್ರೀಡಾಂಗಣದಲ್ಲಿ ನಡೆದದ್ದು ಅಕ್ಷರಶಃ ಇಶಾಂತ್ ಶರ್ಮಾ ಮ್ಯಾಜಿಕ್...ಕ್ರೇಗ್ ಬ್ರಾಥ್ ವೇಟ್ ರನ್ನು ಎಲ್ ಬಿ ಬಲೆಗೆ ಕೆಡವಿದ ಇಶಾಂತ್ ವಿಂಡೀಸ್ ಗೆ 2ನೇ ಆಘಾತ ನೀಡಿದರು. ಬಳಿಕ ಬ್ರೂಕ್ಸ್ ಜಡೇಜಾಗೆ ವಿಕೆಟ್ ಒಪ್ಪಿಸಿದರೆ, ಡರೇನ್ ಬ್ರಾವೋ ಅವರನ್ನು ಬುಮ್ರಾ ಎಲ್ ಬಿ ಬಲೆಗೆ ಕೆಡವಿದರು.

ಬಳಿಕ ವಿಂಡೀಸ್ ದಾಂಡಿಗರನ್ನು ಸಾಲು ಸಾಲಾಗಿ ಇಶಾಂತ್ ಪೆವಿಲಿಯನ್ ಗೆ ಅಟ್ಟಿದರು. ಈ ವೇಳೆ ರುಸ್ಟೋಮ್ ಚೇಸ್ (48 ರನ್) ಕೊಂಚ ಪ್ರತಿರೋಧ ತೋರಿದರೂ ಅವರನ್ನೂ ಕೂಡ ಇಶಾಂತ್ ಔಟ್ ಮಾಡಿದರು. ಅಂತಿಮವಾಗಿ ದಿನದಾಟದ ಅಂತ್ಯಕ್ಕೆ ವಿಂಡೀಸ್ ತಂಡ 8 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿದ್ದು, ನಾಯಕ ಜೇಸನ್ ಹೋಲ್ರ್ (10 ರನ್)ಮತ್ತು ಮಿಗುಲ್ ಕಮಿನ್ಸ್ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಭಾರತದ ಪರ ಇಶಾಂತ್ ಶರ್ಮಾ ಐದು ವಿಕೆಟ್ ಪಡೆದರೆ, ಜಸ್ ಪ್ರೀತ್ ಬುಮ್ರಾ, ಮಹಮದ್ ಶಮಿ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com