ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಭೇಟಿಯಾಗಿದ್ದಾರೆ. 

Published: 24th August 2019 01:09 PM  |   Last Updated: 24th August 2019 01:09 PM   |  A+A-


Sunil Gavaskar-Donald-Trump

ಸುನಿಲ್ ಗವಾಸ್ಕರ್-ಡೊನಾಲ್ಡ್ ಟ್ರಂಪ್

Posted By : Vishwanath S
Source : The New Indian Express

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಭೇಟಿಯಾಗಿದ್ದಾರೆ. 

ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಒದಗಿಸುವ ಚಾರಿಟಿ ಫೌಂಡೇಶನ್ ಗಾಗಿ ಹಣ ಮತ್ತು ಜಾಗೃತಿ ಮೂಡಿಸಲು ಸುನಿಲ್ ಗವಾಸ್ಕರ್ ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ನ್ಯೂಯಾರ್ಕ್ ನ ಟ್ರಂಪ್ ಬೆಡ್ಮಿನ್ಸ್ಟರ್ ಗಲ್ಫ್ ಕೋರ್ಸ್ ನಲ್ಲಿ ಡೊನಾಲ್ಡ್ ಟ್ರಂಪ್ ರನ್ನು ಭೇಟಿಯಾದರು. 

ವೆಸ್ಟ್ ಇಂಡೀಸ್ ಮತ್ತು ಟೀಂ ಇಂಡಿಯಾ ನಡುವಿನ ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ನಡೆಸಿ ಹಾರ್ಟ್ ಟು ಹಾರ್ಟ್ ಫೌಂಡೇಶನ್ ಜಾಗೃತಿ ಮೂಡಿಸಲು ಬಳಸಿಕೊಳ್ಳಲಾಗಿತ್ತು. ಶ್ರೀ ಸತ್ಯ ಸಾಯಿ ಸಂಜೀವಿನ ಆಸ್ಪತ್ರೆಯ ಮಕ್ಕಳಿಗೆ ಉಚಿತ ಶಸ್ತ್ರ ಚಿಕಿತ್ಸೆಗಳನ್ನು ಒದಗಿಸುತ್ತಿದೆ. 

ನ್ಯೂ ಜೆರ್ಸಿ ಮತ್ತು ಅಟ್ಲಾಂಟದಲ್ಲಿ ನಡೆದ ಅನೇಕ ನಿಧಿಸಂಗ್ರಹಣೆ ಕಾರ್ಯಕ್ರಮಗಳಲ್ಲಿ ಗವಾಸ್ಕರ್ ಭಾಗವಹಿಸಿ ಸುಮಾರು 230ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಗೆ ಹಣವನ್ನು ಸಂಗ್ರಹಿಸಿದ್ದರು.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿಯಲ್ಲಿ ಗವಾಸ್ಕರ್ ಕಾಮೆಂಟೆಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp