ನಾಯಕನಾಗಿ ಟೆಸ್ಟ್ ಗೆಲುವಿನಲ್ಲಿ ಧೋನಿ ದಾಖಲೆ ಸರಿಗಟ್ಟಿದ ರನ್ ಮೆಷಿನ್ ಕೊಹ್ಲಿ!

ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಮತ್ತೊಂದು ಗರಿ ಮೂಡಿದೆ. ವೆಸ್ಟ್ ಇಂಡೀಸ್ ವಿರುದ್ಧ 318 ರನ್ ಗಳ ದಾಖಲೆಯೊಂದಿಗೆ ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ಎಂಎಸ್ ಧೋನಿ ನಾಯಕತ್ವದಲ್ಲಿದ್ದ 27 ಟೆಸ್ಟ್ ಗೆಲುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ. 
ಧೋನಿ, ಕೊಹ್ಲಿ
ಧೋನಿ, ಕೊಹ್ಲಿ

ನಾರ್ಥ್ ಸೌಂಡ್ : ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಮತ್ತೊಂದು ಗರಿ ಮೂಡಿದೆ. ವೆಸ್ಟ್ ಇಂಡೀಸ್ ವಿರುದ್ಧ 318 ರನ್ ಗಳ ಬಹೃತ್ ಮೊತ್ತದೊಂದಿಗೆ ಟೀಂ ಇಂಡಿಯಾ ಗೆಲುವು ಸಾಧಿಸುವ ಮೂಲಕ ಎಂಎಸ್ ಧೋನಿ ನಾಯಕತ್ವದಲ್ಲಿದ್ದ 27 ಟೆಸ್ಟ್ ಗೆಲುವಿನ ದಾಖಲೆಯನ್ನು ಸರಿಗಟ್ಟಿದ್ದಾರೆ. 

ಟೆಸ್ಟ್ ಕ್ರಿಕೆಟ್ ನಲ್ಲಿ ಧೋನಿ ಹಾಗೂ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಹೆಚ್ಚಿನ ಗೆಲುವು ಸಾಧಿಸಿದೆ. 60 ಪಂದ್ಯಗಳಲ್ಲಿ ಧೋನಿ ಈ ಸಾಧನೆ ಮಾಡಿದರೆ, ಕೊಹ್ಲಿ ಕೇವಲ 47 ಟೆಸ್ಟ್ ಗಳಲ್ಲಿ ಈ ಸಾಧನೆ ಮಾಡಿದ ನಾಯಕ ಎನಿಸಿಕೊಂಡಿದ್ದಾರೆ

ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ  27 ಪಂದ್ಯಗಳಲ್ಲಿ ಗೆಲುವು, 18 ಸೋಲು ಹಾಗೂ 15 ಡ್ರಾ ಮಾಡಿಕೊಂಡಿದೆ. ಈ ಮೂಲಕ ಧೋನಿ ನಾಯಕತ್ವದಲ್ಲಿ ಶೇ, 45 ರಷ್ಟು ಗೆಲುವು ಸಾಧಿಸಲಾಗಿದೆ. ಮತ್ತೊಂದೆಡೆ ಕೊಹ್ಲಿ ನಾಯಕತ್ವದಲ್ಲಿ 47 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ 27 ರಲ್ಲಿ ಗೆಲುವು ಸಾಧಿಸಿದ್ದು, 10 ಪಂದ್ಯಗಳಲ್ಲಿ ಸೋತಿದೆ ಮತ್ತು 10 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲಾಗಿದೆ. ಇದರೊಂದಿಗೆ  ಕೊಹ್ಲಿಯ ಗೆಲುವಿನ ಶೇಕಡವಾರು 55. 31 ರಷ್ಟಾಗಿದೆ. 

ಟೀಂ ಇಂಡಿಯಾ ನಾಯಕನಾಗಿ ವಿದೇಶಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿರುವ ನಾಯಕನಾಗಿ ಸೌರವ್ ಗಂಗೂಲಿ ಅವರ ದಾಖಲೆಯನ್ನು ಕೂಡಾ ರನ್ ಮೆಷಿನ್ ಕೊಹ್ಲಿ ಮುರಿದಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ ವಿದೇಶಗಳಲ್ಲಿ ಆಡಿದ 28 ಪಂದ್ಯಗಳಲ್ಲಿ 11ರಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಕೊಹ್ಲಿಯ ನಾಯಕತ್ವದಲ್ಲಿ 26 ಪಂದ್ಯಗಳಲ್ಲಿ 12 ಪಂದ್ಯಗಳಲ್ಲಿ ಗೆಲುವು ಸಾಧಿಸಲಾಗಿದೆ. 

2014ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಧೋನಿ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ನಂತರ ಕೊಹ್ಲಿ ನಾಯಕತ್ವದ ಹೊಣೆ ವಹಿಸಿಕೊಂಡಿದ್ದರು. 2018ರಲ್ಲಿ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 3-1 ಅಂತರದಲ್ಲಿ ಗೆದ್ದು ಬಾರ್ಡರ್ ಗವಾಸ್ಕರ್ ಸರಣಿಯನ್ನು ವಶಪಡಿಸಿಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com