ಕ್ರಿಕೆಟ್’ಗೆ ವಿದಾಯ ಘೋಷಿಸಿದ ಲಂಕಾ ಸ್ಪಿನ್ನರ್ ಅಜಂತಾ ಮೆಂಡಿಸ್!

ಶ್ರೀಲಂಕಾದ ಖ್ಯಾತ ಸ್ಪಿನ್ ಬೌಲರ್ ಅಜಂತಾ ಮೆಂಡಿಸ್ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ಅಜಂತಾ ಮೆಂಡಿಸ್
ಅಜಂತಾ ಮೆಂಡಿಸ್

ಕೊಲಂಬೊ: ಶ್ರೀಲಂಕಾದ ಖ್ಯಾತ ಸ್ಪಿನ್ ಬೌಲರ್ ಅಜಂತಾ ಮೆಂಡಿಸ್ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

ಮೆಂಡಿಸ್ ಅವರು ಶ್ರೀಲಂಕಾ ಪರ 19 ಟೆಸ್ಟ್, 87 ಏಕದಿನ, 39 ಟಿ-20 ಪಂದ್ಯ ಆಡಿದ್ದು, ಒಟ್ಟಾರೆಯಾಗಿ 288 ವಿಕೆಟ್ ಪಡೆದಿದ್ದಾರೆ. ಮೆಂಡಿಸ್ 2015ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ್ದರು.

34 ವರ್ಷದ ಮೆಂಡಿಸ್ 2008ರ ಜುಲೈನಲ್ಲಿ ಭಾರತ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಮೆಂಡಿಸ್ ಏಪ್ರಿಲ್ 2008 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದ್ದರು.

ವಿಶ್ವ ಕ್ರಿಕೆಟ್‌ಗೆ ಕೇರಂ ಬಾಲ್ ಎಸೆತವನ್ನು ಪರಿಚಯಿಸಿದ್ದ ಅಜಂತ ಮೆಂಡಿಸ್ ಒಬ್ಬ ಅಪರೂಪದ ಕ್ರಿಕೆಟಿಗನಾಗಿದ್ದರು. ಒಟ್ಟು 87 ಏಕದಿನ ಪಂದ್ಯಗಳನ್ನು ಆಡಿದ ಮೆಂಡಿಸ್ 152 ವಿಕೆಟ್​​, 39 ಟಿ-20ಯಲ್ಲಿ 66 ವಿಕೆಟ್​ ಹಾಗೂ 19 ಟೆಸ್ಟ್​ ಪಂದ್ಯದಲ್ಲಿ 70 ವಿಕೆಟ್​​​ ಪಡೆದ ಸಾಧನೆ ಮಾಡಿದ್ದಾರೆ.

ಮೆಂಡಿಸ್ ಏಕದಿನದಲ್ಲಿ ಅತಿವೇಗದ 50 ವಿಕೆಟ್‌, ಅಂತಾ​ರಾ​ಷ್ಟ್ರೀಯ ಟಿ20ಯಲ್ಲಿ 2 ಬಾರಿ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಪಡೆದು ಮಿಂಚಿದ್ದಲ್ಲದೆ ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್’ನಲ್ಲಿ 6 ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ದಾಖಲೆ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com