ರಾಹುಲ್ ದ್ರಾವಿಡ್ ಕೋಚ್ ಹುದ್ದೆಗೆ ಕೊಕ್: ಇನ್ನೂ ಎನ್ ಸಿಎ ಮುಖ್ಯಸ್ಥ ಮಾತ್ರ

ಸುಮಾರು ನಾಲ್ಕು ವರ್ಷಗಳಿಂದ ಭಾರತ ಎ ಹಾಗೂ ಅಂಡರ್ -19 ತಂಡಗಳ ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಇನ್ನೂ ಮುಂದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಮಾತ್ರವೇ ಮುಂದುವರಿಯಲಿದ್ದಾರೆ.
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ಮುಂಬೈ: ಸುಮಾರು ನಾಲ್ಕು ವರ್ಷಗಳಿಂದ ಭಾರತ ಎ ಹಾಗೂ ಅಂಡರ್ -19 ತಂಡಗಳ ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಇನ್ನೂ ಮುಂದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿ ಮಾತ್ರವೇ ಮುಂದುವರಿಯಲಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಜವಾಬ್ದಾರಿಗಳನ್ನು ಬಿಸಿಸಿಐ ಇತ್ತೀಚಿಗೆ ದ್ರಾವಿಡ್ ಅವರಿಗೆ ಹಸ್ತಾಂತರಿಸಿದ ಹಿನ್ನೆಲೆಯಲ್ಲಿ ಕಿರಿಯರ ತಂಡಗಳ ಪ್ರಧಾನ ತರಬೇತುದಾರ ಸ್ಥಾನದಿಂದ ತೊರೆಯಬೇಕಾಗಿದೆ. ಹಾಗಾಗಿ ದ್ರಾವಿಡ್ ಸ್ಥಾನದಲ್ಲಿ ಇಬ್ಬರು ತರಬೇತುದಾರರನ್ನು ನೇಮಿಸಲಾಗಿದೆ.

ಭಾರತ ಎ ತಂಡದ ಪ್ರಧಾನ ಕೋಚ್ ಆಗಿ ಸೀತಾನ್ಷು ಕೊಟಾಕು ಅವರನ್ನು ನೇಮಿಸಲಾಗಿದೆ. ಪಾರಸ್ ಮಾಂಬ್ರೆ ಅವರನ್ನು  ಅಂಡರ್ -19 ತಂಡದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿದೆ.

ಪಾರಾಸ್ ಮಾಂಬ್ರೆ  ಭಾರತ- ಎ ಹಾಗೂ 19 ವರ್ಷದೊಳಗಿನ ತಂಡಗಳಿಗೆ ದ್ರಾವಿಡ್ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಹಾಗಾಗಿ ಮಾಂಬ್ರೆ ಅವರನ್ನು ಅಂಡರ್-19 ಮುಖ್ಯ ಕೋಚ್ ಎಂದು ನೇಮಿಸಲಾಗಿದೆ.

ಮತ್ತೊಂದೆಡೆ ಕೊಟಾಕ್ ಅವರು 130 ಮೊದಲ ದರ್ಜೆ ಪಂದ್ಯಗಳನ್ನು ಆಡಿದ್ದಾರೆ . ಆದರೆ, ಅವರನ್ನು ಕೇವಲ ಎರಡು ತಿಂಗಳು ಮಾತ್ರ ತರಬೇತುದಾರರನ್ನಾಗಿ ನೇಮಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.  

ದ್ರಾವಿಡ್ ಅವರನ್ನು 2015ರಲ್ಲಿ ಭಾರತ ಕ್ರಿಕೆಟ್ ನ ಕಿರಿಯ ರಾಷ್ಟ್ರೀಯ ತಂಡಗಳ ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು.ತಳಮಟ್ಟದಲ್ಲಿ ಆಟಗಾರರ ಶೋಧನೆ ಮತ್ತು ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಲ್ಪಿಸುವಲ್ಲಿ ದ್ರಾವಿಡ್ ಯಶಸ್ವಿಯಾಗಿದ್ದಾರೆ.  ಹಲವು ಯುವ ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ದ್ರಾವಿಡ್ ಪ್ರಮುಖ ಕಾರಣರಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com