ನಿವೃತ್ತಿ ನಿರ್ಧಾರದ ಬಗ್ಗೆ ಅಂಬಾಟಿ ರಾಯುಡು ಯೂ ಟರ್ನ್‌!

ಐಸಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ನೀಡಲಿಲ್ಲವೆಂದು ಬೇಸತ್ತು ಅಂಬಾಟಿ ರಾಯುಡು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಬಲಗೈ ಬ್ಯಾಟ್ಸ್‌ಮನ್‌ ಯೂ ಟರ್ನ್‌ ಹೊಡೆದಿದ್ದು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದಾರೆ.
ಅಂಬಾಟಿ ರಾಯುಡು
ಅಂಬಾಟಿ ರಾಯುಡು

ನವದೆಹಲಿ: ಐಸಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ನೀಡಲಿಲ್ಲವೆಂದು ಬೇಸತ್ತು ಅಂಬಾಟಿ ರಾಯುಡು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಬಲಗೈ ಬ್ಯಾಟ್ಸ್‌ಮನ್‌ ಯೂ ಟರ್ನ್‌ ಹೊಡೆದಿದ್ದು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದಾರೆ.

ಜೂನ್‌ ತಿಂಗಳಲ್ಲಿ ತೆಗೆದುಕೊಂಡಿದ್ದ ಕ್ರಿಕೆಟ್‌ ವೃತ್ತಿ ಜೀವನ ನಿವೃತ್ತಿ ನಿರ್ಧಾರ ಭಾವುಕವಾದದ್ದು ಹಾಗಾಗಿ, ಮತ್ತೊಮ್ಮೆ ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆಯುತ್ತೇನೆಂದು ಹೈದರಾಬಾದ್‌ ಕ್ರಿಕೆಟ್‌ ಅಸೋಸಿಯೇಷನ್‌ಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಮುಂದೆ ಆಯ್ಕೆಗೆ ಅಂಬಾಟಿ ರಾಯುಡು ಲಭ್ಯರಾಗಲಿದ್ದಾರೆ. 

ಈ ಹಿಂದೆ ಘೋಷಿಸಿದ್ದ ಕ್ರಿಕೆಟ್‌ ನಿವೃತ್ತಿ ನಿರ್ಧಾರವನ್ನು ಹಿಂಪಡೆಯುತ್ತಿದ್ದೇನೆ. ಇನ್ನು ಮುಂದೆ ಎಲ್ಲ ಮಾದರಿಯ ಕ್ರಿಕೆಟ್‌ ಆಡುತ್ತೇನೆ ಎಂದು ಎಚ್‌ಸಿಎ ಹಾಗೂ ಕ್ರಿಕೆಟ್‌ ಆಡಳಿತ ಮಂಡಳಿಗೆ ರಾಯುಡು ಇ-ಮೈಲ್‌ ಮಾಡಿದ್ದಾರೆ. ನನ್ನ ಕ್ರಿಕೆಟ್‌ ವೃತ್ತಿ ಜೀವನದ ಕಠಿಣ ಸಂದರ್ಭಗಳಲ್ಲಿ ಜತೆಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ವಿವಿಎಸ್‌ ಲಕ್ಷ್ಮಣ್‌ ಹಾಗೂ ನೊಯಿಲ್‌ ಡೇವಿಡ್‌ ಅವರಿದೆ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಇವರು ನನ್ನು ದುಡಿಕಿನ ನಿರ್ಧಾರವನ್ನು ಅರ್ಥೈಸಿದ್ದರು" ಎಂದು ಹೇಳಿದ್ದಾರೆ. ಮುಂಬರುವ ಆವೃತ್ತಿಯಲ್ಲಿ ಪ್ರತಿಭಾವಂತ ಹೈದರಾಬಾದ್‌ ತಂಡದ ಪರ ಆಡುತ್ತಿದ್ದೇನೆ.  ಸೆ. 10 ರಿಂದ ಹೈದರಾಬಾದ್‌ ತಂಡಕ್ಕೆ ಲಭ್ಯನಾಗಲಿದ್ದೇನೆ ಎಂದರು. 

ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಅಂಬಾಟಿ ರಾಯುಡು ವಿಫಲರಾಗಿದ್ದರು. ಆದರೆ, ಅವರಿಗೆ ಸ್ಟಾಂಡ್‌ ಬೈನಲ್ಲಿ ಸ್ಥಾನ ನೀಡಲಾಗಿತ್ತು. ಶಿಖರ್‌ ಧವನ್‌ ಗಾಯವಾಗಿದ್ದರು. ಇವರ ಬದಲು ವಿಜಯ್‌ ಶಂಕರ್ ಅವರಿಗೆ ಸ್ಥಾನ ನೀಡಲಾಗಿತ್ತು. ಇದರಿಂದ ಕೆರಳಿದ್ದ ರಾಯುಡು ಈ ಬಾರಿ ಐಸಿಸಿ ವಿಶ್ವಕಪ್‌ ನೋಡಲು 3ಡಿ ಗ್ಲಾಸ್‌ಗೆ ಆರ್ಡರ್‌ ಮಾಡಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು. ಆ ಮೂಲಕ ಆಯ್ಕೆದಾರ ಎಂ.ಎಸ್‌.ಕೆ ಪ್ರಸಾದ್‌ ಅವರ ವಿರುದ್ಧ ಕಿಡಿಕಾರಿದ್ದರು. 

ಕಳೆದ ವರ್ಷ ಇವರು ನಿಗದಿತ ಮಾದರಿ ಕಡೆ ಹೆಚ್ಚಿನ ಗಮನ ಹರಿಸಲು ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com