2ನೇ ಟೆಸ್ಟ್: ಕೊಹ್ಲಿ, ಮಾಯಾಂಕ್ ಅರ್ಧಶತಕ, ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಟೀಂ ಇಂಡಿಯಾ!

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ಮಾಯಾಂಕ್ ಅಗರ್ವಾರ್ ಅವರ ಅರ್ಧಶತಕ ನೆರವಿನಿಂದ ಸ್ಫರ್ಧಾತ್ಮಕ ಮೊತ್ತ ಪೇರಿಸಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮತ್ತು ಮಾಯಾಂಕ್ ಅಗರ್ವಾರ್ ಅವರ ಅರ್ಧಶತಕ ನೆರವಿನಿಂದ ಸ್ಫರ್ಧಾತ್ಮಕ ಮೊತ್ತ ಪೇರಿಸಿದೆ.

ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದಾಗಿ ಟೀಂ ಇಂಡಿಯಾ ಇನ್ನಿಂಗ್ಸ್ ಆರಂಭಿಸಿದ್ದು ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 264 ರನ್ ಪೇರಿಸಿದೆ. 

ಜಮೈಕಾದ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕೇವಲ 13 ರನ್ ಗಳಿಸಿ ಹೋಲ್ಡರ್ ಬೌಲಿಂಗ್ ನಲ್ಲಿ ಔಟ್ ಆಗಿದ್ದು, 6 ರನ್ ಗಳಿಸಿದ್ದ ಪೂಜಾರಾ ಕೂಡ ಬೇಗನೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಇನ್ನು ಆರಂಭಿಕ ಆಘಾತ ಅನುಭವಿಸಿರುವ ಭಾರತಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ನೆರವಾಗಿದ್ದು ಅರ್ಧಶತಕ(55) ಸಿಡಿಸಿ ಔಟಾದರು. ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದು ತಂಡದ ರನ್ ಗತಿ ಹೇರಿಸಿದರು. ಕೊಹ್ಲಿ 76 ರನ್ ಗಳಿಸಿದ್ದಾಗ ಹೋಲ್ಡರ್ ಬೌಲಿಂಗ್ ನಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿದರು. ಸದ್ಯ ಹನುಮ ವಿಹಾರಿ ಅಜೇಯ 42 ಮತ್ತು ರಿಷಬ್ ಪಂತ್ ಅಜೇಯ 27 ರನ್ ಪೇರಿಸಿ ಕ್ರೀಸ್ ನಲ್ಲಿದ್ದಾರೆ. 

ವಿಂಡೀಸ್ ಪರ ಹೋಲ್ಡರ್ 3 ವಿಕೆಟ್, ಕಾರ್ನ್ ವಾಲ್ ಹಾಗೂ ರೋಚ್ ತಲಾ 1 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com