ಎಂಎಸ್‌ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಅಧಿಕಾರಾವಧಿ ಅಂತ್ಯಗೊಳಿಸಿದ ಗಂಗೂಲಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿತ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಯ್ಕೆ ಸಮಿತಿಯ ಅಧಿಕಾರಾವಧಿ ವಿಸ್ತರಿಸಲು ಮುಂದಾಗದ ಕಾರಣ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರ ಅಧಿಕಾರವಧಿ ಭಾನುವಾರವೇ ಕೊನೆಯಾಯಿತು.
ಎಂಎಸ್‌ಕೆ ಪ್ರಸಾದ್
ಎಂಎಸ್‌ಕೆ ಪ್ರಸಾದ್

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿತ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅವರು ಆಯ್ಕೆ ಸಮಿತಿಯ ಅಧಿಕಾರಾವಧಿ ವಿಸ್ತರಿಸಲು ಮುಂದಾಗದ ಕಾರಣ ಭಾರತ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರ ಅಧಿಕಾರವಧಿ ಭಾನುವಾರವೇ ಕೊನೆಯಾಯಿತು.

ನಿಮ್ಮ ಅಧಿಕಾರ ಅವಧಿಗಿಂತಲೂ ಮುಂದುವರಿಯಲು ಸಾಧ್ಯವಿಲ್ಲ ಎಂದು ಸೌರವ್ ಗಂಗೂಲಿ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ. ಬಿಸಿಸಿಐನ ಈ ಹಿಂದಿನ ನಿಯಮದ ಪ್ರಕಾರ ಆಯ್ಕೆ ಸಮಿತಿಯು ಗರಿಷ್ಠ 4 ವರ್ಷಕ್ಕಿಂತಲೂ ಹೆಚ್ಚು ಕಾಲ ಮುಂದುವರಿಯುವಂತಿಲ್ಲ. ಆದರೆ, ನೂತನ ಸಂವಿಧಾನದ ನಿಯಮದ ಅನ್ವಯ ಒಟ್ಟು ಐದು ವರ್ಷಗಳ ಕಾಲ ಮುಂದುವರಿಯಬಹುದಾಗಿತ್ತು. ಆದರೆ, ಸೌರವ್ ಗಂಗೂಲಿ ಅವರು ಪ್ರಸಾದ್ ಅವರ ಸಮಿತಿಯನ್ನು ಭಾನುವಾರ ನಡೆದ ಸಭೆಯೊಂದಿಗೆ ಅಂತ್ಯಗೊಳಿಸಿದರು.

ಆಯ್ಕೆ ಸಮಿತಿಗೆ ಎಂ.ಎಸ್. ಕೆ ಪ್ರಸಾದ್ ಮತ್ತು ಗಗನ್ ಖೋಡ ಅವರನ್ನು 2015ರಲ್ಲಿ ಬಿಸಿಸಿಐ ನೇಮಕ ಮಾಡಲಾಗಿತ್ತು. ಜತೆಗೆ, ಜತಿನ್ ಪ್ರಪಂಜೆ, ಶರಣ್‌ದೀಪ್ ಸಿಂಗ್ ಮತ್ತು ದೇವಾಂಗ್ ಗಾಂಧಿ 2016ರಲ್ಲಿ ಆಯ್ಕೆ ಸಮಿತಿಗೆ ಸೇರ್ಪಡೆಯಾಗಿದ್ದರು. ಆದರೆ, ಈಗ ಯಾವ ಸದಸ್ಯರೂ ಆಯ್ಕೆ ಸಮಿತಿಯಲ್ಲಿ ಮುಂದುವರಿಯುವಂತಿಲ್ಲ.

"ಅಧಿಕಾರಾವಧಿ ಮುಗಿದಿದೆ (ಅಂದರೆ) ಅಧಿಕಾರಾವಧಿ ಮುಗಿದಿದೆ. ಅವರು ಉತ್ತಮ ಕೆಲಸ ಮಾಡಿದ್ದಾರೆ. ನಿಮ್ಮ ಅಧಿಕಾರಾವಧಿಯನ್ನು ಮೀರಿ ಹೋಗಲು ಸಾಧ್ಯವಿಲ್ಲ ಅದೆಲ್ಲವೂ ಒಂದು ಸಮಸ್ಯೆಯೆಂದು ನಾನು ಭಾವಿಸುವುದಿಲ್ಲ" ಸಿಸಿಐನ 88 ನೇ ವಾರ್ಷಿಕ ಸಾಮಾನ್ಯ ಸಭೆ (ಎಜಿಎಂ) ನಂತರ ಗಂಗೂಲಿ ಹೇಳಿದ್ದಾರೆ.

"ನೀವು ಕೇಳಿರುವಂತೆ, ಐಸಿಸಿ ಈಗ ಪ್ರತಿವರ್ಷ ಪಂದ್ಯಾವಳಿಗಳನ್ನು ಬಯಸುತ್ತದೆ, ಇದರರ್ಥ ಆಯ್ಕೆದಾರರು ಶಾಶ್ವತವಾಗಿ ಮುಂದುವರಿಯುತ್ತಾರೆ ಎಂದಲ್ಲ. ಅವರಿಗೆ ಅಧಿಕಾರಾವಧಿ ಇರಲಿದೆ. ನಾವದನ್ನು ಗಮನಿಸಿದ್ದೇವೆ." ಗಂಗೂಲಿ ಹೇಳಿಕೆಯಂತೆ ಹೊಸ ಆಯ್ಕೆದಾರರು  ಐದು ವರ್ಷಗಳ ಅವಧಿಯನ್ನು ಹೊಂದಿರುತ್ತಾರೆ.

ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯೊಂದಿಗೆ ನಾನು ಚೆನ್ನಾಗಿ ಸಂಬಂಧ ಹೊಂದಿದ್ದೇನೆ. ನಾನು ಆಯ್ಕೆ ಸಮಿತಿಯಲ್ಲಿರಲಿಲ್ಲ ಎಂಬ ಕಾರಣಕ್ಕೆ ಅವರು ಕೆಟ್ಟವರಾಗಿದ್ದಾರೆ ಎಂದಲ್ಲ. ಅವರು ಉತ್ತಮ ಕೆಲಸ ಮಾಡಿದ್ದಾರೆ , ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ನಮಗೆ ಯಾವುದೇ ಸಮಸ್ಯೆ ಇಲ್ಲ. ಎಂದು ಅವರು ಹೇಳಿದ್ದಾರೆ.

ಪ್ರಸಾದ್ ನೇತೃತ್ವದ  ಐದು ಮಂದಿಯ ಸಮಿತಿಯ ಅಧಿಕಾರಾವಧಿಯಲ್ಲಿ ಭಾರತೀಯ ತಂಡವು ಸಾಕಷ್ಟು ಯಶಸ್ಸನ್ನು ಕಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com