ಭವಿಷ್ಯದಲ್ಲಿ ವಾರ್ನರ್ ನನ್ನ ದಾಖಲೆ ಮುರಿಯಲಿದ್ದಾರೆ- ಬ್ರಿಯಾನ್ ಲಾರಾ

ಪಾಕಿಸ್ತಾನ ವಿರುದ್ಧ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ತ್ರಿ ಶತಕ ಪೂರೈಸಿ ಬ್ರಿಯಾನ್ ಲಾರಾ ಅವರ 400 ರನ್ ದಾಖಲೆ ಮುರಿಯುವತ್ತ ಸಾಗುತ್ತಿದ್ದ ವೇಳೆ ಡಿಕ್ಲೇರ್ ಘೋಷಿಸಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ನಿರ್ಧಾರಕ್ಕೆ ಸ್ವತಃ ವೆಸ್ಟ್ ಇಂಡೀಸ್ ದಂತಕತೆಯೇ ಬೇಸರ ವ್ಯಕ್ತಪಡಿಸಿದ್ದಾರೆ.

Published: 02nd December 2019 01:43 PM  |   Last Updated: 02nd December 2019 01:43 PM   |  A+A-


WarnerLara1

ಡೇವಿಡ್ ವಾರ್ನರ್ , ಬ್ರಿಯಾನ್ ಲಾರಾ

Posted By : Nagaraja AB
Source : UNI

ಅಡಿಲೇಡ್:  ಪಾಕಿಸ್ತಾನ ವಿರುದ್ಧ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ತ್ರಿ ಶತಕ ಪೂರೈಸಿ ಬ್ರಿಯಾನ್ ಲಾರಾ ಅವರ 400 ರನ್ ದಾಖಲೆ ಮುರಿಯುವತ್ತ ಸಾಗುತ್ತಿದ್ದ ವೇಳೆ ಡಿಕ್ಲೇರ್ ಘೋಷಿಸಿದ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ನಿರ್ಧಾರಕ್ಕೆ ಸ್ವತಃ ವೆಸ್ಟ್ ಇಂಡೀಸ್ ದಂತಕತೆಯೇ ಬೇಸರ ವ್ಯಕ್ತಪಡಿಸಿದ್ದಾರೆ.

ಬ್ರಿಯಾನ್ ಲಾರಾ ಅವರು ಶನಿವಾರ ವಾಣಿಜ್ಯ ಕಾರ್ಯಕ್ರಮ ನಿಮಿತ್ತ ಅಡಿಲೇಡ್‍ಗೆ ಆಗಮಿಸಿದ್ದರು. ಇದೇ ದಿನ ಡೇವಿಡ್ ವಾರ್ನರ್ ವೃತ್ತಿ ಜೀವನದ ತ್ರಿ ಶತಕ ಸಿಡಿಸಿದ್ದರು. 335 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದರು. ಆದರೆ, ನಾಯಕ ಟಿಮ್ 583/3 ಕ್ಕೆ ಪ್ರಥಮ ಇನಿಂಗ್ಸ್ ಅನ್ನು ಡಿಕ್ಲೇರ್ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಲಾರಾ, " ವಾರ್ನರ್ ಅವರ ಇನಿಂಗ್ಸ್ ಅದ್ಭುತವಾಗಿತ್ತು. ಮಹತ್ವದ ದಾಖಲೆಯ ಜತೆಗೆ ಆಸ್ಟ್ರೇಲಿಯಾದ ಹೊನಲು-ಬೆಳಕಿನ ಟೆಸ್ಟ್ ಪಂದ್ಯದ ಗೆಲುವನ್ನು ನೋಡಬಹುದಿತ್ತು. ಡೇವಿಡ್ ವಾರ್ನರ್ ಬ್ಯಾಟಿಂಗ್ ಮಾಡಲು ಇನ್ನೂ 12 ಓವರ್ ಅವಕಾಶ ಕಲ್ಪಿಸಬೇಕಿತ್ತು. ಅವರು ಟೀ ವಿರಾಮದ ವೇಳೆಗೆ ನನ್ನ 400 ರನ್ ಗಳ ದಾಖಲೆ ಮುರಿಯುತ್ತಿದ್ದರು." ಎಂದು ಹೇಳಿದರು.

Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp