ಭಾರತ-ವಿಂಡೀಸ್ ಪಂದ್ಯಕ್ಕೆ ಮಹತ್ವದ ಬದಲಾವಣೆ: ನೋ ಬಾಲ್ ವೀಕ್ಷಣೆಗೆ ಥರ್ಡ್ ಅಂಪೈರ್!

ಭಾರತ ಮತ್ತು ವಿಂಡೀಸ್ ನಡುವಿನ ಟಿ20 ಪಂದ್ಯ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದೆ. ಹೌದು ಮೈದಾನದ ಅಂಪೈರ್ ಬದಲಿಗೆ ಥರ್ಡ್ ಅಂಪೈರ್ ನೋ ಬಾಲ್ ಕೊಡಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತ ಮತ್ತು ವಿಂಡೀಸ್ ನಡುವಿನ ಟಿ20 ಪಂದ್ಯ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಲಿದೆ. ಹೌದು ಮೈದಾನದ ಅಂಪೈರ್ ಬದಲಿಗೆ ಥರ್ಡ್ ಅಂಪೈರ್ ನೋ ಬಾಲ್ ಕೊಡಲಿದ್ದಾರೆ. 

ಮಹತ್ವದ ಟೂರ್ನಿಗಳಲ್ಲಿ ಅಂಪೈರ್ ಗಳು ನೋ ಬಾಲ್ ನೀಡುವ ವಿಚಾರದಲ್ಲಿ ತುಂಬಾ ಎಡವಿದ್ದಾರೆ. ಇದು ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಹೀಗಾಗಿ ಸಮಸ್ಯೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. 

ಇನ್ನು ಮುಂದೆ ಥರ್ಡ್ ಅಂಪೈರ್ ಫ್ರಂಟ್ ಫುಟ್ ನೋ ಬಾಲ್ ಅನ್ನು ನಿರ್ಧರಿಸಲಿದ್ದಾರೆ. ಪ್ರತೀ ಎಸೆತವನ್ನೂ ಪರೀಕ್ಷಿಸಿದ ನಂತರ ಮೈದಾನದ ಅಂಪೈರ್ ಅನ್ನು ಸಂಪರ್ಕಿಸುವ ಮೂಲಕ ನೋ ಬಾಲ್ ಕೊಡಲು ಸೂಚಿಸುತ್ತಾರೆ. 

ಈ ಬಗ್ಗೆ ಐಸಿಸಿ ಪ್ರಕಟನೆ ನೀಡಿದ್ದು ಮೂರನೇ ಅಂಪೈರ್ ನಿರ್ದೇಶನವಿಲ್ಲದೆ ಮೈದಾನದಲ್ಲಿರುವ ಅಂಪೈರ್ ಫ್ರಂಟ್ ಫುಟ್ ನೋ ಬಾಲ್ ನೀಡುವ ಆಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com