ಆತ ನನ್ನ ತಂಗಿಯೊಂದಿಗೆ ಬೆಡ್‌ನಲ್ಲಿ ಮಲಗಿದ್ದ ಎಂದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಡುಪ್ಲೆಸಿಸ್, ವಿಡಿಯೋ ವೈರಲ್!

ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್ ನೀಡಿರುವ ಹೇಳಿಕೆಯೊಂದು ಇದೀಗ ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಹರ್ಡಸ್-ಡುಪ್ಲೆಸಿಸ್
ಹರ್ಡಸ್-ಡುಪ್ಲೆಸಿಸ್

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್ ನೀಡಿರುವ ಹೇಳಿಕೆಯೊಂದು ಇದೀಗ ಕ್ರಿಕೆಟ್ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 

ಹೌದು, ಮಾಂಝಿ ಸೂಪರ್ ಲೀಗ್ ಟೂರ್ನಿಯ ಪಾರ್ಲ್ ರಾಕ್ಸ್ ಮತ್ತು ನೆಲ್ಸನ್ ಮಂಡೇಲ ತಂಡಗಳ ನಡುವಿನ ಪಂದ್ಯ ಆರಂಭಕ್ಕೂ ಮುನ್ನ ಡುಪ್ಲೆಸಿಸ್ ಹರ್ಡಸ್ ವಿಲ್ ಜೋನ್ ಈ ಪಂದ್ಯದಲ್ಲಿ ಆಡುವುದಿಲ್ಲ. ಅವರು ನನ್ನ ತಂಗಿ ಜೊತೆ ಬೆಡ್ ನಲ್ಲಿ ಮಲಗಿದ್ದಾರೆ ಎಂದು ಹೇಳಿದ್ದಾರೆ. 

ಈ ಹೇಳಿಕೆ ಕೇಳಿ ಸಂದರ್ಶಕ ಶಾಕ್ ಆದರು. ನಂತರ ಡುಪ್ಲೆಸಿಸ್ ಹರ್ಡಸ್ ನನ್ನ ತಂಗಿಯ ಜೊತೆ ನಿನ್ನೆ ಮದುವೆಯಾಗಿದ್ದಾರೆ. ಹೀಗಾಗಿ ಅವರು ಪಂದ್ಯಕ್ಕೆ ಲಭ್ಯವಿಲ್ಲ. ವಿವಾಹದ ಘಳಿಗೆಯನ್ನು ಆನಂದಿಸುತ್ತಿದ್ದಾರೆ ಎಂದು ಹೇಳಿದರು. 

ಹರ್ಡಸ್ ವಿಲ್ ಜೋನ್ ಡುಪ್ಲೆಸಿಸ್ ಸಹೋದರಿ ರೆಮಿ ರೈನೆರ್ಸ್ ಜೊತೆ ನಿನ್ನೆ ಮದುವೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com