ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದಲೂ ಶಿಖರ್ ಧವನ್ ಹೊರಗೆ?

ಗಾಯದ ಸಮಸ್ಯೆಯಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟಿ-20  ಸರಣಿಯಿಂದ ಹೂರಗುಳಿದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್, ಏಕದಿನ ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆ ಇದೆ
ಶಿಖರ್ ಧವನ್
ಶಿಖರ್ ಧವನ್

ನವ ದೆಹಲಿ: ಗಾಯದ ಸಮಸ್ಯೆಯಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟಿ-20  ಸರಣಿಯಿಂದ ಹೂರಗುಳಿದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್, ಏಕದಿನ ಪಂದ್ಯಗಳಿಂದಲೂ ಹೊರಗುಳಿಯುವ ಸಾಧ್ಯತೆ ಇದೆ. ಆರಂಭದಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದ ಧವನ್ ಬಳಿಕ ಅವರನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್ ಅವರನ್ನು  ಆಯ್ಕೆ ಮಾಡಲಾಗಿದೆ.

ನಾಳೆ ಮುಂಬೈಯಲ್ಲಿ ನಡೆಯಲಿರುವ  ಅಂತಿಮ ಟಿ-20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಆಡುವ ಸಾಧ್ಯತೆ ಇದ್ದು, ಡಿಸೆಂಬರ್ 15ರಿಂದ ಚೆನ್ನೈಯಲ್ಲಿ ಏಕದಿನ ಸರಣಿ ಆರಂಭವಾಗಲಿದೆ. 

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಶಿಖರ್ ಧವನ್ ಎಡ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದರು. ಹೀಗಾಗಿ ಬಿಸಿಸಿಐ ವೈದ್ಯಕೀಯ ತಂಡವು ಮಂಗಳವಾರ ಪರೀಕ್ಷೆ ನಡೆಸಿ, ಗಾಯವನ್ನು ಗುಣಪಡಿಸಲು ಸಮಯ ಬೇಕಾಗುತ್ತದೆ. ಅವರಿಗೆ ಸ್ವಲ್ಪ ಸಮಯದ ವಿಶ್ರಾಂತಿ ಅತ್ಯವಿದೆ ಎಂದು ತಿಳಿಸಿದೆ. 

ಶಿಖರ್  ಧವನ್ ಅವರ ಸ್ಥಾನದಲ್ಲಿ  ಆಡಲು ಸಂಜು ಸ್ಯಾಮ್ಸನ್ ,  ಶುಬ್ ಮನ್ ಗಿಲ್ ಹಾಗೂ ಟೆಸ್ಟ್ ಆರಂಭಿಕ ಆಟಗಾರ ಮಾಯಾಂಕ್ ಅಗರ್ ವಾಲ್  ನಡುವೆ ಪೈಪೋಟಿ  ಇದೆ. 

ಏಕದಿನ ಸರಣಿಯ ಟೀಂ ಇಂಡಿಯಾ ಇಂತಿದೆ
ವಿರಾಟ್ ಕೊಹ್ಲಿ ( ನಾಯಕ) ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ಸು ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್ ( ವಿಕೆಟ್ ಕೀಪರ್ ) ಶಿವಂ ದುಬೆ, ಕೇದಾರ್ ಜಾಧವ್,  ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್,  ಕುಲದೀಪ್ ಯಾದವ್, ದೀಪಕ್ ಚಾಹರ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com