ಟೀಂ ಇಂಡಿಯಾ ಜೊತೆ ಆಡಲು ನಾವು ರೆಡಿ, ಆದರೆ ನಾವು ಅವರನ್ನು ಬೇಡಲ್ಲ: ಪಿಸಿಬಿ ಮುಖ್ಯಸ್ಥ ಈಶನ್ ಮಣಿ

ಭಾರತ ಸುಮ್ಮನಿದ್ದರು ಪದೇ ಪದೇ ದ್ವಿಪಕ್ಷಿಯ ಟೂರ್ನಿ ಬಗ್ಗೆ ಪ್ರಸ್ತಾಪಿಸುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮಾತ್ರ ನಾವಾಗೆ ಅವರನ್ನು ಬೇಡುವುದಿಲ್ಲ ಎಂದು ಹೇಳುವ ಮೂಲಕ ಮತ್ತೆ ತನ್ನ ಮೊಂಡುತನವನ್ನು ಪ್ರದರ್ಶಿಸಿದೆ. 
ಟೀಂ ಇಂಡಿಯಾ ಜೊತೆ ಆಡಲು ನಾವು ರೆಡಿ, ಆದರೆ ನಾವು ಅವರನ್ನು ಬೇಡಲ್ಲ: ಪಿಸಿಬಿ ಮುಖ್ಯಸ್ಥ ಈಶನ್ ಮಣಿ

ಇಸ್ಲಾಮಾಬಾದ್: ಭಾರತ ಸುಮ್ಮನಿದ್ದರು ಪದೇ ಪದೇ ದ್ವಿಪಕ್ಷಿಯ ಟೂರ್ನಿ ಬಗ್ಗೆ ಪ್ರಸ್ತಾಪಿಸುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಮಾತ್ರ ನಾವಾಗೆ ಅವರನ್ನು ಬೇಡುವುದಿಲ್ಲ ಎಂದು ಹೇಳುವ ಮೂಲಕ ಮತ್ತೆ ತನ್ನ ಮೊಂಡುತನವನ್ನು ಪ್ರದರ್ಶಿಸಿದೆ. 

ಪಿಸಿಬಿ ಅಧ್ಯಕ್ಷ ಈಶನ್ ಮಣಿ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು ಈ ವೇಳೆ ಯಾವುದೇ ದೇಶ ನಮ್ಮ ಜೊತೆಗೆ ಆಡಬೇಕಾದರೆ ಅವರು ಪಾಕಿಸ್ತಾನಕ್ಕೆ ಬರಬೇಕು. 10 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಕ್ರಿಕೆಟ್ ನಡೆಯುತ್ತಿದ್ದು ಎರಡು ಟೆಸ್ಟ್ ಸರಣಿಗಾಗಿ ಶ್ರೀಲಂಕಾ ತಂಡ ಇಲ್ಲಗೆ ಆಗಮಿಸಿದೆ ಎಂದರು. 

ಟೀಂ ಇಂಡಿಯಾ ಮತ್ತು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಉಭಯ ತಂಡಗಳ ನಡುವಿನ ಕ್ರಿಕೆಟ್ ಅನ್ನು ನೋಡಲು ಬಯಸುತ್ತಾರೆ. ಆದರೆ ದುರಾದೃಷ್ಟವಶಾತ್ ಭಾರತದ ಕ್ರಿಕೆಟ್ ಮಂಡಳಿಯಲ್ಲಿ ರಾಜಕೀಯ ಬೆರತು ಹೋಗಿದೆ. ಹೀಗಾಗಿ ಉಭಯ ದೇಶಗಳ ನಡುವೆ ಯಾವುದೇ ಟೂರ್ನಿಗಳು ನಡೆಯುತ್ತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com