ಬ್ಯಾಟಿಂಗ್‌ನಲ್ಲಿ ದಾಖಲೆ ಬರೆದಿದ್ದ ರೋಹಿತ್ ಶರ್ಮಾ ಇದೀಗ ಲಾ ಲೀಗಾ ಭಾರತದ ರಾಯಭಾರಿ!

ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ ಅವರು ಸ್ಪೇನ್ ಫುಟ್ಬಾಲ್‌ನ ಪ್ರಖ್ಯಾತ ಲೀಗ್ ಆದ ಲಾ ಲೀಗಾದ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ನವದೆಹಲಿ: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ ಅವರು ಸ್ಪೇನ್ ಫುಟ್ಬಾಲ್‌ನ ಪ್ರಖ್ಯಾತ ಲೀಗ್ ಆದ ಲಾ ಲೀಗಾದ ಭಾರತದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಜಾಗತಿಕವಾಗಿ ಲಾ ಲೀಗಾ ರಾಯಭಾರಿಯಾಗಿ ನೇಮಕ ಗೊಂಡಿರುವ ಫುಟ್ಬಾಲೇತರ ಮೊದಲ ಕ್ರೀಡಾಪಟು ಭಾರತೀಯ ಕ್ರಿಕೆಟಿಗ ಎಂಬ ಖ್ಯಾಾತಿಗೆ ರೋಹಿತ್ ಶರ್ಮಾ ಭಾಜನರಾಗಿದ್ದಾರೆ.

‘‘ಭಾರತದಲ್ಲಿ ಫುಟ್ಬಾಲ್ ಜಾಗತಿಕ ಬೆಳವಣಿಗೆಯ ಪಥದಲ್ಲಿದೆ ಹಾಗೂ ಇದನ್ನು ಇನ್ನು ಮುಂದೆ ನಿದ್ರಾವಸ್ಥೆೆಯಲ್ಲಿರುವ ದೈತ್ಯ’ ಎಂದು ಪರಿಗಣಿಸಲಾಗುವುದಿಲ್ಲ. ಕಳೆದ ಐದು ವರ್ಷಗಳಲ್ಲಿ  ಫುಟ್ಬಾಲ್‌ನಲ್ಲಿನ ಆಸಕ್ತಿಯಲ್ಲಿ ನಾವು ಗಮನಾರ್ಹ ಬೆಳವಣಿಗೆಯನ್ನು ಕಂಡಿದ್ದೇವೆ. ಇದರ ಶ್ರೇಯ ಅಭಿಮಾನಿಗಳು ಸೇರಿದಂತೆ ಅದರೊಂದಿಗೆ ಸಂಬಂಧ ಹೊಂದಿರುವ ಎಲ್ಲರಿಗೂ ಸಲ್ಲಬೇಕು,’’ ಎಂದು ರೋಹಿತ್ ಶರ್ಮಾ ತಿಳಸಿದ್ದಾರೆ. 

ಭಾರತದಲ್ಲಿ ಫುಟ್ಬಾಲ್ ಕ್ರೀಡೆಯ ಬೆಳವಣಿಗೆ ಸಾಧಿಸುವ ಉದ್ದೇಶದಿಂದ ಲಾ ಲೀಗಾ ಕಳೆದ 2017ರಿಂದ ತನ್ನ ಗಮನ ಹರಿಸುತ್ತಿದೆ. ಅಂದಿನಿಂದ ತನ್ನ ಕಚೇರಿಯನ್ನು ತೆರೆದು ಶ್ರಮಿಸುತ್ತಿದೆ. ಲೀಗ್ ಎಲ್ಲಾ 3000 ಪಂದ್ಯಗಳನ್ನು ಭಾರತೀಯ ಪ್ರೇಕ್ಷಕರಿಗೆ ಉಚಿತವಾಗಿ ಒದಗಿಸಲು ಫೇಸ್‌ಬುಕ್‌ನೊಂದಿಗೆ  ಪ್ರಸಾರ ಪಾಲುದಾರಿಕೆಯಾದ ಲಾಲೀಗಾ ಫುಟ್ಬಾಲ್ ಶಾಲೆಗಳಂತಹ ಹಲವಾರು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದೆ.

ಲಾ ಲೀಗಾದೊಂದಿಗೆ ಸಂಬಂಧ ಹೊಂದಲು ನನಗೆ ನಿಜವಾಗಿಯೂ ಸಂತೋಷವಾಗಿದೆ. ಸ್ಪ್ಯಾನಿಷ್ ದೈತ್ಯ ಕ್ಲಬ್‌ವೊಂದು ತಳಮಟ್ಟದ ಕಾರ್ಯಕ್ರಮದ ಮೂಲಕ ಭಾರತೀಯ ಫುಟ್ಬಾಲ್ ವ್ಯವಸ್ಥೆೆಯಲ್ಲಿ ಅತಿಕ್ರಮಣ ಮಾಡಿರುವುದನ್ನು ನೋಡಲು ಇದು ಉತ್ತೇಜನಕಾರಿಯಾಗಿದೆ. ವೈಯಕ್ತಿಕವಾಗಿ, ಲಾಲೀಗಾದೊಂದಿಗೆ ಸುಂದರವಾದ ಆಟದಲ್ಲಿ ನನ್ನ ಪಾಲಿಗೆ ಆಸಕ್ತಿದಾಯಕ ಪ್ರಯಾಣವೆಂದು ನಾನು ಪರಿಗಣಿಸುತ್ತೇನೆ. ಭಾರತದ ಫುಟ್ಬಾಲ್ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಲು ನಾನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದು ರೋಹಿತ್ ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com